ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಬೆಳಗಾವಿ : ಮಹಾರಾಷ್ಟ್ರದ ಶಾಸಕ ಉದಯ ಸಾಮಂತ ಅವರು ಇವತ್ತು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದು, ನಾಳೆ ರವಿವಾರ ದಿ. 31ರಂದು ಬೆಳಗಾವಿ ಎಮ್ ಇಎಸ್ ಮುಖಂಡರ ಜೊತೆ ನಭೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.
ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿ ವಾಸ್ತವ ಮಾಡಲಿರುವ ಮಹಾರಾಷ್ಟ್ರ ಶಾಸಕ ಉದಯ ಸಾಮಂತ ಅವರು ಬೆಳಗಾವಿಯ ಎಮ್ ಇಎಸ್ ಮುಖಂಡರನ್ನು ಭೇಟಿ ಮಾಡಿ ಮಾಡಲಿದ್ದಾರೆ. ರವಿವಾರ ಬೆಳಿಗ್ಗೆ ಝಾಫಾ ಮುಂಡರ ಬೇಟಿಯಾಗಿ ಹಲಾವರು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.
ಯಾವ ವಿಷಯವಾಗಿ ಚರ್ಚೆ ನಡೆಯಲಿದೆ ಎನ್ನುವದು ಇನ್ನೂ ನಿಗೂಢ ವಾಗಿದ್ದು, ನಾಳೆಯೇ ಚಿತ್ರಣ ಹೊರಬರಲಿದೆ.