ಯಶವಂತರಾಯಗೌಡ ಪಾಟೀಲರಿಗೆ ಸುಚಿವ ಸ್ಥಾನ ನೀಡಬೇಕು: ಲಕ್ಷ್ಮಣ ಹಿರೇಕುರಬರ
Yashwant Rayagouda Patil should be given a ministerial position: Lakshman Hirekurabara
ಲೋಕದರ್ಶನ ವರದಿ
ತಾಂಬಾ 30 : ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರು ಅನುಭವ, ಹಿರಿತನ, ಪಕ್ಷ ನಿಷ್ಠೆ ಹಾಗೂ ಜನಪರ ಕಾರ್ಯಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ " ಆದ ವಿಶಿಷ್ಟ ಗುರುತನ್ನು ಹೊಂದಿರುವ ನಾಯಕರಾಗಿದ್ದಾರೆ ಎಂದು ಇಂಡಿ ತಾಲೂಕಾ ಕನಕ ಸೇನೆಯ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ದಿವಂಗತ ವಿಠಲಗೌಡ ಪಾಟೀಲರ ಕಾಲದಿಂದಲೂ ಅವರ ಕುಟುಂಬವು ಯಾವುದೇ ವೈಯಕ್ತಿಕ - ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ . ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿ ಸೇವೆ ಸಲ್ಲಿಸಿಕೊಂಡು ಬಂದಿದೆ ಎಂದು ಹೇಳಿದ್ದಾರೆ. ಯಶವಂತರಾಯಗೌಡ ಪಾಟೀಲರು ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿ ಅಪಾರ ಆಡಳಿತ ಅನುಭವ ಮತ್ತು ಜನಸೇವೆಯ ಪರಿಪಕ್ವತೆಯನ್ನು ಗಳಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ, ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಹಾಗೂ ಗಡಿನಾಡಿನ ಅಭಿವೃದ್ಧಿಯ ಕುರಿತು ಅವರ ಬದ್ಧತೆ ಸದಾ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಂಜುಂಡಪ್ಪ ವರದಿಯ ಪ್ರಕಾರ ಕರ್ನಾಟಕದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲೊಂದಾದ ಇಂಡಿ ಭಾಗವು ಸ್ವಾತಂತ್ರ್ಯಾನಂತರ ಇಂದಿನವರೆಗೂ ಸಚಿವ ಸ್ಥಾನದಿಂದ ಮಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಈ ಬಾರಿ ಸಚಿವ ಸಂಪುಟದಲ್ಲಿ ಇಂಡಿ ಮತಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಂತ ಅಗತ್ಯವಾಗಿದೆ ಇಂಡಿಯ ನಿಂಬೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸುವಂತೆ ಮಾಡಿದರು ಮುಖ್ಯಮಂತ್ರಿಗಳ ಮನಸ್ಸು ಗೆದ್ದು ಸಾವಿರಾರು ಕೋಟಿ ರೂಗಳ ಅನುಧಾನವನ್ನು ಕ್ಷೇತ್ರಕ್ಕೆ ತಂದರು, ಹೋಸ ಸರಕಾರಕ್ಕೆ ಕಲರ್ ತುಂಬಬೇಕಾದರೆ ಯಶವಂತರಾಯಗೌಡರು ಸಚಿವ ಸಂಪುಟದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ. ಗಡಿನಾಡು ಜನರ ಶ್ರೇಯೋಭಿವೃದ್ಧಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷ ನಿಷ್ಠೆಗೆ ಗೌರವ ಸೂಚಕವಾಗಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಈ ಬಾರಿ ಸುಚಿವ ಸ್ಥಾನ ನೀಡಬೇಕು ಎಂದು ಇಂಡಿ ತಾಲೂಕಾ ಕನಕ ಸೇನೆಯ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ ಅವರು ವರಿಷ್ಠರಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ವಿನಮ್ರವಾಗಿ ಮನವಿ ಮಾಡಿದ್ದಾರೆ.
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ 