ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲನಗೌಡ ಸೋಮನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಸಭೆ

ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲನಗೌಡ ಸೋಮನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಸಭೆ District Agricultural Society Executive Committee meeting chaired by District President Shri Mallana

ಲೋಕದರ್ಶನ ವರದಿ 

ಧಾರವಾಡ 30:  ಜಂಟಿ ಕೃಷಿ ನಿರ್ದೇಶಕರ ಕಚೇರಿ, ಧಾರವಾಡದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲನಗೌಡ ಸೋಮನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಸಭೆಯು ಜರುಗಿತು. ಸದರಿ ಸಭೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದಡಿಯಲ್ಲಿ ದೊರೆಯುವ ಮುಂಗಾರು ಬಿತ್ತನೆ ಬೀಜಗಳ ಮಾಹಿತಿ ತಿಳಿಸಲಾಯಿತು ಹಾಗೂ ಬೇಡಿಕೆಗನುಗುಣವಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಲಭ್ಯವಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.  ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಹನಿ ನೀರಾವರಿ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಹಾಗೂ ಯಾಂತ್ರಿಕರಣ ಯೋಜನೆಯಡಿ ರೈತರಿಗೆ ಸಹಾಯಧನದಡಿಯಲ್ಲಿ ಸ​‍​‍್ರೇಯರ​‍್ಸ‌, ಮಿನಿ ಟ್ರ್ಯಾಕ್ಟರ್, ಟ್ರೇಲರ್, ರೋಟಾವೇಟರ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ರೇಷ್ಮೆ ಇಲಾಖೆ ಅಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಉತ್ತೇಜನಕ್ಕಾಗಿ ಸರ್ಕಾರದಿಂದ ರೇಷ್ಮೆ ನಾಟಿಗೆ, ರೇಷ್ಮೆ ಮನೆಗೆ ಹಾಗೂ ಗೂಡು ಮಾರಾಟಕ್ಕೆ ಇರುವ ಸಹಾಯಧನದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಪ್ರಸ್ತುತ ಇಲಾಖೆಯಲ್ಲಿ ಸಾಂಕ್ರಾಮಿಕ ರೋಗದ ಲಸಿಕಾ ಕಾರ್ಯಕ್ರಮ ಚಾಲ್ತಿಯಲ್ಲಿದ್ದು ವರ್ಷಕ್ಕೆ ಎರೆಡು ಬಾರಿ ಲಸಿಕೆ ನೀಡಲಾಗುವುದು ಹಾಗೂ ರೈತರಿಗೆ 50 ಅ ಸಹಾಯಧನದಡಿಯಲ್ಲಿ ಮೆವು ಕತ್ತರಿಸುವ ಯಂತ್ರ ಮತ್ತು ರಾಸುಗಳ ನೇಲಹಾಸುಗಳನ್ನು ವಿತರಿಸುವ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು. ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ ಇಲಾಖೆಯಿಂದ ಮೀನುಕೊಳ ನಿರ್ಮಿಸಿಕೊಳ್ಳಲು 40 ಅ ಸಹಾಯಧನ, ಮೀನು ಮಾರಾಟಗಾರರಿಗೆ ಮೋಟರ್ ಸೈಕಲ್ ತೆಗೆದುಕೊಳ್ಳಲು ಸಹಾಯಧನ, ಈಗಾಗಲೇ ಕೃಷಿ ಹೊಂಡ ಹೊಂದಿದ ರೈತರಿಗೆ ಉಚಿತವಾಗಿ 500 ಮೀನು ಮರಿಗಳನ್ನು ವಿತರಿಸುವ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.  

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ರೈತರಿಗೆ ತಮ್ಮ ವಿಜ್ಞಾನ ಕೇಂದ್ರದಿಂದ ತಾಂತ್ರಿಕ ಮಾಹಿತಿ ಒದಗಿಸಲು ಸಾಕಷ್ಟು ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಕರ್ನಾಟಕ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಡಿ ಚೆಕ್ ಡ್ಯಾಮ್, ಬ್ಯಾರೇಜ್ ಹಾಗೂ ಇನ್ನೂ ಅನೇಕ ನೀರು ಸಂರಕ್ಷಣೆ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು ಇದರಿಂದ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಹಾಗೂ ರೈತರು ಬೇಡಿಕೆಗನುಗುಣವಾಗಿ ಮೇಲಿನ ಘಟಕಗಳನ್ನು ನಿರ್ಮಿಸಲು ಅವಕಾಶವಿದ್ದು ತಮ್ಮ ಬೇಡಿಕೆ ಸಲ್ಲಿಸಲು ತಿಳಿಸಿದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದುವರೆಗೆ 3500 ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 7 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ ಹಾಗೂ ರೈತರ ಮಕ್ಕಳಿಗೆ ಕೌಶಲ್ಯ ತರಬೇತಿಗೆ ಆದ್ಯತೆ ನೀಡಲಾಗುವುದೆಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.  

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ರೇಶನ ಕಾರ್ಡ ತಿದ್ದುಪಡಿ ಚಾಲ್ತಿಯಲ್ಲಿರುತ್ತದೆ ಎಂಬ ಮಾಹಿತಿ ನೀಡಿದರು. ಹೆಸ್ಕಾಂ ಅಧಿಕಾರಿಗಳು ಮಾತನಾಡಿ ಪೂರ್ವ ಮುಂಗಾರು ಮಳೆಗೆ ರೈತರ ಹೊಲಗಳಲ್ಲಿ ವಾಲಿರುವ ಅಥವಾ ಬಿದ್ದಿರುವ ವಿದ್ಯುತ ಕಂಬಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು ರೈತರ ಪಂಪಸೆಟ್‌ಗಳಿಗೆ 7 ಘಂಟೆ 3 ಫೇಸ್ ವಿದ್ಯುತ್ ಒದಗಿಸಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳ ಕುರಿತು ಮಾಹಿತಿ ಒದಗಿಸಿದರು ಹಾಗೂ ಇನ್ನೂಳಿದ  ಗಣಿ ಮತ್ತು ಭೂ ವಿಜ್ಞಾನ, ಕುಡಿಯುವ ನೀರು ಸರಬರಾಜು, ಶಿಕ್ಷಣೆ, ಹಾಗೂ ಲೀಡ್ ಬ್ಯಾಂಕ್, ಕೆಸಿಸಿ ಬ್ಯಾಂಕ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಚಟುವಟಿಕೆ ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಶ್ರೀ ಮಂಜುನಾಥ ಅಂತರವಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗಪ್ಪಾ ಬ. ಬಾಡಿನ, ಜಿಲ್ಲಾ ಖಜಾಂಜಿಗಳಾದ ಶ್ರೀ ಬಸಪ್ಪ ನಿಂ. ಗುಡೆಣ್ಣವರ, ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.