ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ

ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ Arrest of a man who was making country guns: 9 pistols seized: 13 people arrested

ಬೆಳಗಾವಿ : ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಖದೀಮರನ್ನು ಬಂಧಿಸಿರುವ ಜಿಲ್ಲೆಯ ಖಾನಾಪುರ ಪೊಲೀಸರು ಬಂಧಿತರಿಂದ 9 ಪಿಸ್ತೂಲ್ ಹಾಗೂ ಮದ್ದು ಗುಂಡುಗಳು, ತಯಾರಿಕೆಗೆ ಉಪಯೋಗಿಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು. 

    ಶನಿವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪೂರ ತಾಲೂಕಿನ ಕಾಟಗಾಳಿ ಗ್ರಾಮದಲ್ಲಿ 9 ಕಂಟ್ರಿ ಬಂದೂಕುಗಳ ಜಪ್ತಿ ಮಾಡಲಾಗಿದೆ.ಬಂದೂಕು ತಯಾರಿಸುತ್ತಿದ್ದವ, ಬಂದೂಕು ಖರೀದಿಸಿದವರು, ಆಕ್ರಮವಾಗಿ ಮದ್ದುಗುಂಡುಗಳನ್ನು ಮಾರಾಟಮಾಡಿದವರು ಮತ್ತು ಬಂದೂಕಿನ ಬ್ಯಾರೆಲಗಳನ್ನು ವೆಲ್ಡಿಂಗ್ ಮಾಡಿಕೊಡುತ್ತಿದ್ದವನು ಸೇರಿ 13 ಜನರಿಗೆ ಬಂಧನ ಮಾಡಲಾಗಿದೆ ಎಂದರು.

   ಆರೋಪಿ ಮಾರುತಿ ಶ್ರೀಕಾಂತ್ ಸುತಾರ, (ಸಾ: ಕಾಟಗಾಳಿ, ತಾ: ಖಾನಾಪೂರ) ಇವನು ಕಾಟಗಾಳಿ ಗ್ರಾಮದಲ್ಲಿಯ ತನ್ನ ಮನೆಯಲ್ಲಿ ಆಕ್ರಮವಾಗಿ 2024 ರಿಂದ ಈವರೆಗೆ ಕಂಟ್ರಿ ಬಂದೂಕುಗಳನ್ನು (Country-made guns) ತಯಾರಿಸಿ, ಜನರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಸಂಗ್ರಹಿಸಿ ಪೊಲೀಸರು ದಾಳಿ‌ ಮಾಡಿದ್ದಾರೆ.

   ಸಿದ್ರಾಮ ಅಜ್ಜಪ್ಪ ಹಸರೆ, ಸಿಪಿಸಿ ಬ.ನಂ: 4003 ಖಾನಾಪೂರ ಪೊಲೀಸ್ ಠಾಣೆ ಇವರು ದಿ. 11-05-2026ರಂದು ನೀಡಿದ ದೂರಿನ ಮೇರೆಗೆ ಖಾನಾಪೂರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 139/2026 ಕಲಂ: 05, 25[1ಎಎ], 27, 29, 30 ಭಾರತೀಯ ಆಯುಧ ಕಾಯ್ದೆ: 1959 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

    ಆರೋಪಿ ಮಾರುತಿ ಶ್ರೀಕಾಂತ್ ಸುತಾರ ಈತನಿಗೆ ದಿ: 11-05-2026ರಂದು ಬಂಧಿಸಿ ಆತನಿಂದ ತಯಾರಿ ಸ್ಥಿತಿಯಲ್ಲಿದ್ದ ಒಂದು ಕಂಟ್ರಿ ಬಂದೂಕು ಹಾಗೂ ಈ ಆರೋಪಿತನಿಂದ ಕಂಟ್ರಿ ಬಂದೂಕುಗಳನ್ನು ಖರೀದಿಸಿದ ಕಾಟಗಾಳಿ ಗ್ರಾಮದ ಸೋಮನಾಥ ಪಲ್ಲಾದ ಚೌಗುಲೆ, ಸಂತೋಷ ಶಿವಾಜಿ ನಾಯಕ,ಮಾರುತಿ ಯಲ್ಲಪ್ಪ ಗುಡದ್ಯಾಗೋಳ,ಬಾಳು ಭರಮಾಣಿ ನಾಯಕ ಮತ್ತು ಲಕ್ಷ್ಮಣ ಬಾಲಪ್ಪ ಗುಜನಾಳ, (ಸಾ: ಮಾರ್ಕಂಡೆಯ ನಗರ, ತಾ: ಜಿ ಬೆಳಗಾವಿ), ಬಸವರಾಜ ಗಂಗಪ್ಪ ಸಾಲೋಟಗಿ, ಬಸವಂತ ಭರಮಾಣಿ ಯರಮಾಳಕರ, ಲಕ್ಷ್ಮಲ ಈಶ್ವರ ಗುರವ, (ಸಾ: ಮೂವರು ಮೋದೆಕೊಪ್ಪ) ಇವರಿಗೆ ದಿ. 11-05-226 ರಂದು ಬಂಧಿಸಿ ಇವರ ಕಡೆಯಿಂದ ತಲಾ ಒಂದರಂತೆ O8 ಕಂಟ್ರಿ ಬಂದೂಕುಗಳನ್ನು ಜಪ್ತ ಮಾಡಿದ್ದು ಇರುತ್ತದೆ. 

   ಅಲ್ಲದೇ ಆರೋಪಿ ಮಾರುತಿ ಸುತಾರ ಇವನ ಕಡೆಗೆ ಕಂಟ್ರಿ ಬಂದೂಕು ಮಾಡಲು ಹಣ ಕೊಟ್ಟಿದ್ದ ಆರೋಪಿ ಮರಿಯಪ್ಪ ನಿಂಗಪ್ಪ ನಾಯಕ, (ಸಾ: ಕಾಳೇನಟ್ಟಿ, ತಾ: ಜಿ ಬೆಳಗಾವಿ) ಇವನಿಗೆ ಸಹಾ ಬಂಧನ ಮಾಡಿದ್ದು ಇರುತ್ತದೆ.   ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿರುವ ತನ್ನ ಬುಕ್ ಸ್ಟಾಲದಲ್ಲಿ ಬಂದೂಕಿನ ಬಿಡಿಭಾಗಗಳು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಅವುಗಳನ್ನು ಆರೋಪಿ ಮಾರುತಿ ಸುತಾರಇವನಿಗೆ ಮಾರಾಟ ಮಾಡಿದ ಆರೋಪಿ  ವಿಶ್ವನಾಥ @ ಸಂತೋಷ ಸೀತಾರಾಮ ದೇಸಾಯಿ, (ಸಾ: ರಾಮನಗರ,ತಾ: ಜೊಯಿಡಾ) ಇವನಿಗೆ ದಿ: 12-05-2026 ರಂದು ಬಂಧಿಸಿದ್ದು, ಈತನಿಂದ ಬಂದೂಕಿನ 21-ಗರ್‌ಗಳು, 05- ಗಡ್ಡಾ [ಹೆಡ್]ಗಳು, 15-ನಿಪ್ಪಲ್‌ಗಳು, ಒಂದು ಸಿಲಿಂಗ್ ಬೆಲ್ಟ್ ಹಾಗೂ 34 ಮದ್ದು ತುಂಬಿದ ಪ್ಯಾಕೇಟಗಳು, 449 ಚೇರೆ (ಸೀಸಿನ ಗೋಲಗಳು) ಗಳು, 420 ಕೇಪ್‌ಗಳು, 48 ಜೀವಂತ ಕಾಡತೂಸುಗಳನ್ನು ಜಪ್ತಮಾಡಿದ್ದು ಇರುತ್ತದೆ.

   ಬೆಳಗಾವಿ ಶಹರದ ಖಂಜರ ಗಲ್ಲಿಯಲ್ಲಿರುವ ತನ್ನ ಅವೀಜ್ ಗನ್ ಶಾಪ್‌ ಪರವಾನಗಿ ಪತ್ರದ ಅವಧಿಯು: 2021 ರಲ್ಲಿ ಮುಗಿದಿದ್ದರೂ ಸಹಿತ ತನ್ನ ಅಂಗಡಿಯಲ್ಲಿ ಬಾಕಿ ಉಳಿದ ಮದ್ದುಗುಂಡುಗಳು ಹಾಗೂ ಬಂದೂಕಿನಬಿಡಿಭಾಗಗಳನ್ನು ಆರೋಪಿ ವಿಶ್ವನಾಥ @ ಸಂತೋಷ ಸೀತಾರಾಮ ದೇಸಾಯಿ ಇವನಿಗೆ ಅನಧಿಕೃತವಾಗಿ ಮಾರಾಟಮಾಡಿದ ಬೆಳಗಾವಿ ಶಹರದ ಗೊಂದಳ ಗಲ್ಲಿಯ ನಿವಾಸಿಯಾದ ಆರೋಪಿ  ವಿಜಯ ಅಪ್ಪಾಜಿ ಅಂಗೋಳಕರಈತನಿಗೆ ದಿ. 13-05-2026 ರಂದು ಬಂಧಿಸಲಾಗಿದೆ.

    ಬೆಳಗಾವಿ ತಾಲೂಕಿನ ದೇಸೂರ ಗ್ರಾಮ ಹದ್ದಿಯಲ್ಲಿ ಪಣಜಿ-ಬೆಳಗಾವಿ ಹೆದ್ದಾರಿ ಪಕ್ಕದಲ್ಲಿರುವ ತನ್ನ ವೆಲ್ಡಿಂಗ್ಅಂಗಡಿಯಲ್ಲಿ ಆರೋಪಿ ಮಾರುತಿ ಸುತಾರ ಇವನು ತಯಾರಿಸುತ್ತಿದ್ದ ಕಂಟ್ರಿ ಬಂದೂಕುಗಳ ಬ್ಯಾರೆಲಗಳಗೆ ವೆಲ್ಡಿಂಗ್ಮಾಡಿಕೊಡುತ್ತಿದ್ದ ಆರೋಪಿ ಮಹೇಶ ಮಾರುತಿ ಲಕ್ಕೇಬೈಲಕರ, (ಸಾ: ದೇಸೂರ, ತಾ:ಜಿ ಬೆಳಗಾವಿ) ಇವನಿಗೆ ದಿ. 13-05-2026ರಂದು ಬಂಧಿಸಿ ವೆಲ್ಡಿಂಗ್ ಮಶೀನ್ ಜಪ್ತ ಮಾಡಿದ್ದು ಇರುತ್ತದೆ. ಎಲ್ಲಆರೋಪಿತರಿಗೆ  ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಎಸ್ ಪಿ ತಿಳಿಸಿದರು.

    ನನ್ನ ಹಾಗೂ ಹೆಚ್ಚುವರಿ ಎಸ್.ಪಿ ಇವರ ಮಾರ್ಗದರ್ಶನ ಮತ್ತು ಡಿ.ಎಸ್.ಪಿ ಬೈಲಹೊಂಗಲ ಇವರ ನೇತೃತ್ವದಲ್ಲಿ ಎಲ್.ಎಚ್ ಗೌಂಡಿ, ಪಿ.ಐ ಖಾನಾಪೂರ,ಇವರು ಠಾಣಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ತನಿಖೆ ಕೈಕೊಂಡು ಆರೋಪಿತರಿಗೆ ಹಾಗೂ ಕಂಟ್ರಿ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಎಂದು ಎಸ್ ಪಿ ರಾಮರಾಜನ್ ತಿಳಿಸಿದರು ಅಲ್ಲದೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.