ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿ : ಶಾಸಕ ಪಠಾಣ

ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿ : ಶಾಸಕ ಪಠಾಣ  Give representation to the district in the cabinet: MLA Pathana


ಲೋಕದರ್ಶನ ವರದಿ 

ಶಿಗ್ಗಾವಿ  31:  ಹಾವೇರಿ ಜಿಲ್ಲೆಗೆ ಈ ಭಾರಿಯಾದರು ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಶಿಗ್ಗಾವಿ ಸವಣೂರ ಕ್ಷೇತ್ರದ ಶಾಸಕ ಯಾಸೀರ ಅಹ್ಮದಖಾನ ಪಠಾಣ ಒತ್ತಾಯಿಸಿದರು.    ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಹಾವೇರಿ ಜಿಲ್ಲೆಯ ಹಿರಿಯ ಶಾಸಕರನ್ನು ಪರಿಗಣಿಸಬೇಕು ಏಕೆಂದರೆ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ಪ್ರಮುಖವಾಗಿ ಹಿರಿಯ ಶಾಸಕರಾದ ರುದ್ರ​‍್ಪ ಲಮಾಣಿ, ಬಸವರಾಜ ಶಿವಣ್ಣವರ, ಶ್ರೀನಿವಾಸ ಮಾನೆ ಅವರಿಗೆ ಅವಕಾಶ ಇದ್ದು ಜಿಲ್ಲೆಯಿಂದ ಯಾರಾದರೂ ಸಹಿತ ನಮಗೆ ಒಳ್ಳೆಯ ಬೆಳವಣಿಗೆ ಹಾಗೂ ಜಿಲ್ಲೆಯ ಅಭಿವೃದ್ದಿ ಮತ್ತು 2028 ರ ಚುನಾವಣೆಗೆ ಈಗಿನಿಂದ ಸಂಘಟನೆಗೆ ಅನುಕೂಲ ವಾಗಲಿದೆ ಎಂದರು.