ಕಾಲಿನ ಸಮಸ್ಯೆಯಿಂದಾಗಿ ರಮ್ಯಾ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿಲ್ಲ: ಡಿಕೆಶಿ
ಬೆಂಗಳೂರು, ನ.27- ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮಥರ್ಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರ ಸ್ವರೂಪದ್ದಾಗಿದೆ. ಕಳೆದ 6ರಂದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು.ಅದರ ಹಿಂದಿನ ದಿನವೇ ಬಿದ್ದು ಗಾಯಮಾಡಿಕೊಂಡಿದ್ದಾರೆ.ಅವರು ಓಡಾಡದಂತಹ ಪರಿಸ್ಥಿತಿ ಇರುವುದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಲಿಲ್ಲ ಎಂದರು.
.ವಿಷ್ಣು ಸ್ಮಾರಕ ?:
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲೇ ನಿಮರ್ಿಸಬೇಕು ಎಂಬ ಬೇಡಿಕೆ ಸೃಷ್ಟಿಯಾಗಿದೆ.ಈವರೆಗೂ ಆ ಬಗ್ಗೆ ಯಾವುದೇ ಚಚರ್ೆಗಳು ನಡೆದಿರಲಿಲ್ಲ. ನಿನ್ನೆ ಅಂಬರೀಶ್ ಅವರ ಅಂತ್ಯ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲೇ ನೆರವೇರಿಸಲಾಗಿದೆ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇಲ್ಲೇ ನಿಮರ್ಿಸುವ ಬಗ್ಗೆ ಪರಿಸ್ಥಿತಿ ನೋಡಿ ಪ್ರತಿಕ್ರಿಯಿಸಲಾಗುವುದು.ಸದ್ಯಕ್ಕೆ ನಾನು ಆ ಬಗ್ಗೆ ಹೇಳಿಕೆ ನೀಡಲು ಅಧಿಕೃತ ವ್ಯಕ್ತಿ ಅಲ್ಲ ಎಂದು ಹೇಳಿದರು.
7 ಮಂದಿ ಸಸ್ಪೆಂಡ್:
ಜಲಸಂಪನ್ಮೂಲ ಇಲಾಖೆಯಿಂದ ಪಿಡಬ್ಲ್ಯೂಡಿ ಹಾಗೂ ಇತರೆ ಇಲಾಖೆಗಳಿಗೆ ಯರವಲು ಸೇವೆಯಿಂದ ಹೋಗಿದ್ದ ಇಂಜನಿಯರ್ಗಳನ್ನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿಗೆ ವಾಪಸ್ ಬಂದ ಇಂಜನಿಯರ್ಗಳಿಗೆ ಸ್ಥಳ ನಿಯೋಜನೆ ಮಾಡಿ ವಗರ್ಾವಣೆ ಮಾಡಲಾಗಿದೆ. ನಿಯೋಜಿತ ಸ್ಥಳಗಳಿಗೆ ತೆರಳದ ಆರು ಮಂದಿ ಸಹಾಯಕ ಕಾರ್ಯನಿವರ್ಾಹಕ ಇಂಜಿನಿಯರ್, ಒಬ್ಬ ಕಾರ್ಯನಿವರ್ಾಹಕ ಇಂಜಿನಿಯರ್ ಸೇರಿ 7 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 