ಕೀರ್ತನೆ, ತತ್ವಪದಗಳ ಜನಕ ಕೈವಾರ ತಾತಯ್ಯ : ಪ್ರಭುರಾಜ್ ಕೆ.ಎನ್

ಕೀರ್ತನೆ, ತತ್ವಪದಗಳ ಜನಕ ಕೈವಾರ ತಾತಯ್ಯ : ಪ್ರಭುರಾಜ್ ಕೆ.ಎನ್

ಕೊಪ್ಪಳ 08:  ಕೈವಾರ ತಾತಯ್ಯ ಯೋಗಿ ನಾರೇಯಣ ಯತೀಂದ್ರರು ಕೀರ್ತನೆ, ತತ್ವಪದಗಳ ಜನಕ ಎಂದೇ ಪ್ರಸಿದ್ಧರಾಗಿದ್ದವರು ಎಂದು ಕೊಪ್ಪಳ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಭುರಾಜ್ ಕೆ.ಎನ್ ಅವರು ಹೇಳಿದರು. 

ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಮಾ. 07 ರಂದು ಆಯೋಜಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. 

ಯೋಗಿ ನಾರೇಯಣ ಯತೀಂದ್ರರು ತಮ್ಮ ಕೀರ್ತನೆ ಹಾಗೂ ತತ್ವಪದಗಳನ್ನು ಹೇಳುವ ಮೂಲಕ ಮನೆ ಮಾತಾಗಿದ್ದರು. ಕಾಲಜ್ಞಾನಿಯಾದ ಕೈವಾರ ತಾತಯ್ಯ ಯೋಗಿ ನಾರೇಯಣ ಯತೀಂದ್ರರು ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದರು. ಕೈವಾರ ತಾತಯ್ಯನವರು ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಕ ಘಟನೆಗಳು ಸತ್ಯವಾಗಿವೆ. ಆಹಾರವಿದ್ದರು ಕೊಳ್ಳಲು ಆಗಲ್ಲ ದುಬಾರಿ ಜಗತ್ತಿನಲ್ಲಿ ವಿಚಿತ್ರ ಬರಗಾಲ, ಪ್ರಚಲಿತ ವಿಷಯಗಳ ಬಗ್ಗೆ ಬಹಳ ಹಿಂದೆಯೇ ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪಸರಿಸಿದರು. ಗುರುಶಿಷ್ಯರಲ್ಲಿ ಸಾಮರಸ್ಯ ಮನೋಭಾವವಿರಬೇಕು. ಗುರು-ಶಿಷ್ಯರಲ್ಲಿ ಸರ್ವಶ್ರೇಷ್ಠ ಕಾಳಜಿ ನೈಪುಣ್ಯತೆವಿದ್ದರೆ ಸಮಾಜದಲ್ಲಿ ಆದರ್ಶವಾಗಿ ಬದುಕಲು ಸಾಧ್ಯ ಎಂದು ಕೈವಾರ ತಾತಯ್ಯನವರು ತಿಳಿಸಿ ಕೊಟ್ಟಿದ್ದಾರೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಸಮಾಜದಲ್ಲಿ ನಾವು ಎಲ್ಲಾ ಧರ್ಮವನ್ನು ಕಾಪಾಡಿಕೋಳ್ಳವುದರ ಮೂಲಕ ಯೋಗಿ ನಾರೇಯಣರ ನೀತಿ ಭೋದನೆ ಮತ್ತು ಆದರ್ಶಗಳನ್ನು ಪಾಲಿಸುತ್ತಾ ಜೀವನ ನಡೆಸಬೇಕು. ಇದರ ಜೊತೆಗೆ ಅವರ ತತ್ವ ಸಿದ್ಧಾಂತವನ್ನು ಇತರರಿಗೂ ಭೋಧನೆ ಮಾಡಬೇಕು ಎಂದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ ಅವರು ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಕೊಟ್ರೇಶ ಮರಬನಳ್ಳಿ, ಸಮಾಜದ ಮುಖಂಡರಾದ ಶ್ರೀನಿವಾಸ ಕಟ್ಟಿಮನಿ, ಬಿ.ರಮೇಶ, ಸೋಮನಾಥ ಕನಕಗಿರಿ, ನಾರಾಯಣಪ್ಪ ಯಂಕಪ್ಪ, ರಾಮಣ್ಣ, ಮಹಾಂತೇಶ, ಗಂಗಾಧರ ಕಟ್ಟಿಮನಿ, ಹನುಮಂತಪ್ಪ ಜಂತಕಲ್, ನಾಗರಾಜ ಕನಕಗಿರಿ, ಶ್ರೀನಿವಾಸ ಕನಕಗಿರಿ, ಆಂಜನೇಯ ಬೆಟಗೇರಿ, ಗಿರೀಶ ಕಟ್ಟಿಮನಿ, ಗಿರೀಶ ಕನಕಗಿರಿ, ಅಶೋಕ ಹುಣಸಿಗಿಡ, ಟಿ.ಸತೀಶ, ಪಂಪಾಪತಿ ಚಿಂತಪಲ್ಲಿ, ವರಲಕ್ಷ್ಮೀ ಚಿಂತಪಲ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯರಾದ ಸಿವಿ ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮೆರವಣಿಗೆ : ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಭಾವಚಿತ್ರದ ಮೆರವಣಿಗೆಗೆ ನಗರದ ಕೋಟೆಯ ರಸ್ತೆಯ ಮಹೇಶ್ವರ ದೇವಸ್ಥಾನದ ಹತ್ತಿರ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಕೊಪ್ಪಳ ತಹಶೀಲ್ದಾರರಾದ ಅಮರೇಶ ಬಿರಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಕೊಟ್ರೇಶ ಮರಬನಳ್ಳಿ ಸೇರಿದಂತೆ ಹಲವು ಗಣ್ಯರು ಹಾಗೂ ಸಮಾಜದ ಮುಖಂಡರು ಇದ್ದರು. ಬಳಿಕ ಮೆರವಣಿಗೆಯು ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು. ವಿವಿಧ ಕಲಾತಂಡಗಳು, ಕುಂಬಹೊತ್ತ ಮಹಿಳೆಯರು ಮೆರವಣಿಗೆಯನ್ನು ಆಕರ್ಷಕಗೊಳಿಸಿದರು 

ಸುದ್ದಿ ಓದಿ