ಬಿಜೆಪಿ ಸರಕಾರವನ್ನು ಬೇರು ಸಹಿತ ಕಿತ್ತೊಗೆಯಿರಿ ; ಸಿದ್ದರಾಮಯ್ಯ
ಹುಕ್ಕೇರಿ ; ಭಾರತೀಯ ಜನತಾ ಪಕ್ಷ ಭೃಷ್ಟಾಚಾರ ಹಾಗೂ ವಚನ ಭೃಷ್ಟ ಸರಕಾರವಾಗಿದ್ದು ಸುಳ್ಳು ಹೇಳುವದರಲ್ಲಿ ನಿಸ್ಸೀಮವಾಗಿದೆ. 2018 ರ ಚುನಾವಣೆ ಮುನ್ನ ರಾಜ್ಯದ ಜನತೆಗೆ 600 ಭರವಸೆಗಳನ್ನು ನೀಡಿದ್ದು ಅದರಲ್ಲಿ ಕೇವಲ 50 ಭರವಸೆಗಳನ್ನು ಮಾತ್ರ ಪೂರ್ಣಗೊಳಿಸಿದ್ದಾರೆ. ಆದರೆ ಕಾಂಗ್ರೇಸ ಪಕ್ಷ ಅಧಿಕಾರದಲ್ಲಿದ್ದಾಗ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಪೂರ್ಣ ಗೊಳಿಸಿರುವದಾಗಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರಕಾರವನ್ನು ಕಟುವಾಗಿ ಟೀಕಿಸಿದರು.
ಅವರು ಗುರುವಾರದಂದು ನಗರದಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ ಬಿಪಿಎಲ್ ಕಾರ್ಡಧಾರಕರಿಗೆ 10 ಕಿಲೋ ಅಕ್ಕಿ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವದಾಗಿ ಈಗಾಗಲೇ ಗ್ಯಾರಂಟಿ ಕಾರ್ಡ ನೀಡಿರುವದಾಗಿ ತಿಳಿಸಿದರು. ಕಾಂಗ್ರೇಸ ಪಕ್ಷ ಬಡವರ, ದೀನ ದಲಿತರ, ಕೂಲಿಕಾರರ, ಯುವಕರ ಹಾಗೂ ಅಲ್ಪ ಸಂಖ್ಯಾತರ ಪಕ್ಷವಾಗಿದ್ದು ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಇವರೆಲ್ಲರ ಅಭಿವೃದ್ಧಿ ಸಾಧ್ಯವೆಂದರು ಈ ಬಾರಿ ನೂರಕ್ಕೆ ನೂರರಷ್ಟು ಕಾಂಗ್ರಸ ಅಧಿಕಾರಕ್ಕೆ ಬರುವದಾಗಿ ಸತ್ಯವೆಂದು ಭವಿಷ್ಯ ನುಡಿದರು. ಹುಕ್ಕೇರಿ ಮತ ಕ್ಷೇತ್ರದ ನೀರಾವರಿಗಾಗಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿಸಿದ್ಧೇಶ್ವರ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಇಲ್ಲಿಯ ವರೆಗೆ ಬಿಜೆಪಿ ಸರಕಾರ ಅವುಗಳಿಗೆ ಚಾಲನೆ ನೀಡದಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಅಭಿವೃದ್ಧಿಗಾಗಿ ನಿಷ್ಠಾವಂತ ಹಾಗೂ ಇಚ್ಛಾಶಕ್ತಿ ಪ್ರತಿನಿಧಿಗಳ ಅವಶ್ಯಕತೆಯಿದೆ. ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಜನರ ಭಾವನೆ ಕೆರಳಿಸಿ ದಾರಿ ತಪ್ಪಿಸುತ್ತಿರುವದಾಗಿ ಅವರು ಆರೋಪಿಸಿದರು.
ನಮ್ಮ ಸರಕಾರದಲ್ಲಿದ್ದ ಆಡಳಿತ ಹಾಗೂ ಇಂದಿನ ಬಿಜೆಪಿ ಸರಕಾರವನ್ನು ತುಲನೆ ಮಾಡಿ ನಾವು ಸುಳ್ಳು ಹೇಳುತ್ತಿದ್ದರೆ ನಮ್ಮನ್ನು ಬೆಂಬಲಿಸ ಬೇಡಿ. ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಒಂದೇ ವೇದಿಕೆಯಲ್ಲಿ ಬಂದು ನಮ್ಮ ಜೊತೆ ಚರ್ಚೆ ಮಾಡಲಿ. ಅವರು ಇತಿಹಾಸವನ್ನು ತಿರುಚಿತ್ತಿದ್ದು ಯಾವದೇ ಕಾರಣಕ್ಕೆ ಅವರು ಅಧಿಕಾರಕ್ಕೆ ಬರಬಾರದು ಈ ಪಕ್ಷವನ್ನು ಬೇರು ಸಹಿತ ಕಿತ್ತೊಗೆಯಲು ಕರೆ ನೀಡಿದರು. ನಮ್ಮ ಸರಕಾರ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಇಂದಿರಾ ಕ್ಯಾಂಟಿನ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ನೀಡಿ ಹಸಿವು ಮುಕ್ತ ರಾಜ್ಯ ಮಾಡಿರುವದಾಗಿ ತಿಳಿಸಿದರು. ನಾವು 8 ಸಾವಿರದಾ 160 ಕೋಟಿ ರೈತರ ಸಾಲ ಮನ್ನಾ ಮಾಡಿರುವದಾಗಿ ತಿಳಿಸಿದ ಅವರು ಈ ಸರಕಾರ ಅದಾನಿ, ಅಂಬಾನಿ ಈ ಭಂಢವಾಳಶಾಹಿಗಳ ಕೊಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದೆ. ಬಡವರ, ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲಾ. ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿವೆೆ ಸರ್ವ ಸಾಮಾನ್ಯ ಜನರ ಜೀವನ ದುಸ್ತರವಾಗಿದೆಯೆಂದರು ಈ ಬಾರಿ ಬದಲಾವಣೆ ಮಾಡಿ ಕಾಂಗ್ರೇಸಿನ ಅಧಿಕೃತ ಅಭ್ಯಥರ್ಿಯಾದ ಎ.ಬಿ.ಪಾಟೀಲರನ್ನು ಬಹು ಮತಗಳಿಂದ ಆಯ್ಕೆ ಮಾಡಲು ಕೈ ಮುಗಿದು ಬೇಡಿಕೊಂಡರು.
ಹುಕ್ಕೇರಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವಿಜಯ ರವದಿ ಸ್ವಾಗತಿಸಿದರು. ಮಾಜಿ ಸಚಿವರು ಹಾಗೂ ಕಾಂಗ್ರೇಸ ಪಕ್ಷದ ಅಧಿಕೃತ ಅಭ್ಯರ್ಥಿ ಎ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿಯ ಭೃಷ್ಟಾಚಾರ, ಹಗರಣಗಳು, ಪೊಳ್ಳು ಆಶ್ವಾಸನೆ, ದುರಾಡಳಿತದ ಬಗ್ಗೆ ಕಟುವಾಗಿ ಟೀಕಿಸಿದರು. ಸತೀಶ ಜಾರಕಿಹೊಳಿ, ಜಮೀರ ಅಹ್ಮದ ಮಾತನಾಡಿದರು. ಇದೇ ಸಂದಂರ್ಭದಲ್ಲಿ ಸಿದ್ರಾಮಯ್ಯ ಹಾಗೂ ಹಿರಿಯ ಸಹಕಾರಿ ಧುರೀಣ ಡಿ.ಟಿ.ಪಾಟೀಲ ಅವರನ್ನು ಹುಕ್ಕೇರಿ ಬ್ಲಾಕ್ ಕಾಂಗ್ರೇಸ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಸಿದ್ರಾಮಯ್ಯ, ಕಾಕಾಸಾಹೇಬ ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮಣ ಚಿಂಗಳೆ, ವೀರಕುಮಾರ ಪಾಟೀಲ, ಪ್ರಕಾಶ ರಾಠೋಡ, ವಿನಯ ಪಾಟೀಲ, ನಿರ್ಮಲಾ ಪಾಟೀಲ, ಮಹಾವೀರ ಮೋಹಿತೆ, ಅಶೋಕ ಪಟ್ಟಣ, ಕಲ್ಪನಾ ಜೋಶಿ, ವಿಜಯ ರವದಿ,ಶ್ಯಾಮ ಘಾಟಗೆ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿಜಯ ರವದಿ, ಶ್ಯಾಮ ಘಾಟಗೆ. ಪ್ರವಾಸಿ ಮಂದಿರದಿಂ ಬೈಕ್ ರ್ಯಾಲಿ ನಡೆಯಿತು. ಪುಷ್ಪ ವೃಷ್ಠಿ ಮಾಡಿ ಸಿದ್ದರಾಮಯ್ಯನವರನ್ನು ವೇದಿಕಗೆೆ ಸ್ವಾಗತಿಸಲಾಯಿತು