29ರಂದು ನಡೆಯಲಿರುವ ಕ್ಷತ್ರಿಯ ಸಮಾವೇಶ ಯಶಸ್ವಿಗೊಳಿಸಿ
ಲೋಕದರ್ಶನ ವರದಿ
ಅಜಿತಕುಮಾರ ದೇಸಾಯಿ ಕರೆ: ಪೂರ್ವಭಾವಿ ಸಭೆ, ಕ್ಷತ್ರಿಯರ ನಡೆ ರಾಜಧಾನಿಯ ಕಡೆಗೆ ಬಿತ್ತಿ ಪತ್ರ ಬಿಡುಗಡೆ
ಸವದತ್ತಿ 24: ಕ್ಷತ್ರಿಯ ಸಮಾಜದಲ್ಲಿ ಸುಮಾರು 36 ಪಂಗಡಗಳಿದ್ದು, ಅವುಗಳನ್ನೆಲ್ಲಾ ಒಂದುಗೂಡಿಸುವ ನಿಟ್ಟಿನಲ್ಲಿ ಜ.29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ತ ಕ್ಷತ್ರಿಯ ಸಮಾವೇಶದಲ್ಲಿ ಸವದತ್ತಿ ಮತ್ತು ಯರಗಟ್ಟಿ ತಾಲೂಕಿನ ಎಲ್ಲ ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕ್ಷತ್ರಿಯ ಸಮಾಜದ ಮುಖಂಡರಾದ ಅಜಿತಕುಮಾರ ದೇಸಾಯಿ ಹೇಳಿದರು.
ಪಟ್ಟಣದ ಗಿರಿಜನ್ನವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕನರ್ಾಟಕ ಕ್ಷತ್ರಿಯ ಒಕ್ಕೂಟದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದ ಕುರಿತು ಹಮ್ಮಿಕೊಂಡ ಕ್ಷತ್ರಿಯ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷತ್ರಿಯ ಸಮಾಜದಲ್ಲಿ ಬರುವ ಎಲ್ಲ ಪಂಗಡಗಳನ್ನು ಬಲಪಡಿಸುವ ಸಲುವಾಗಿ ಒಕ್ಕೂಟದ ರಾಜ್ಯಾಧ್ಯಕ್ಷ ಉದಯಸಿಂಗ್ರವರು ನಿರಂತರವಾಗಿ ಶ್ರಮಿಸುತ್ತಿದ್ದು, ಸಮಾಜ ಬಾಂಧವರು ಸಂಪೂರ್ಣ ಸಹಕಾರ ನೀಡಬೇಕೆಂದರು.
ಶಿವಾನಂದ ಹೂಲಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷತ್ರಿಯ ಪಂಗಡಗಳಲ್ಲಿ ತಾಲೂಕಿನಲ್ಲಿ ಬರುವ ಮರಾಠ, ಕ್ಷತ್ರಿಯ, ಸೂರ್ಯವಂಶ ಕ್ಷತ್ರಿಯ, ರಜಪೂತ, ಭಾವಸಾರ ಸೇರಿದಂತೆ ತಾಲೂಕಿನಲ್ಲಿ ಅನೇಕ ಪಂಗಡಗಳ ಜನರು ಈ ಬೃಹತ್ತ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದು, ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ನಾವೆಲ್ಲ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದೇವೆ ಎಂದರು. ಸಮುದಾಯದ ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ಶೈಕ್ಷಣಿಕ, ಔದ್ಯೋಗಿಕ, ಆಥರ್ಿಕ ಮತ್ತು ರಾಜಕೀಯ ಪ್ರಗತಿಗಾಗಿ ನಾವು ಒಗ್ಗಟ್ಟಾಗಬೇಕಿದೆ. ಈ ಒಗ್ಗಟ್ಟು ಪ್ರದಶರ್ಿಸುವ ನಿಟ್ಟಿನಲ್ಲಿ ಬೃಹತ್ತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದರು.
ಮರಾಠ ಸಮಾಜದ ಮುಖಂಡ ಶಿವಾಜಿರಾವ್ ಜಾಧವ ಹಾಗೂ ಕ್ಷತ್ರಿಯ ಸಮಾಜದ ಲಕ್ಷ್ಮಣ ಪಾಟೀಲ ಮಾತನಾಡಿ, ಕ್ಷತ್ರಿಯ ಸಮಾಜದಲ್ಲಿ ಬರುವ ಆಯಾ ಉಪ ಪಂಗಡಗಳ ಮುಖಂಡರು ತಮ್ಮ ಸಮುದಾಯದ ಜನರನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನ ಮಾಡಬೇಕೆಂದರು.
ಮರಾಠ ಸಮಾಜದ ಮುಖಂಡ ಪುಂಡಲೀಕ ಭೀ. ಬಾಳೋಜಿ ಮಾತನಾಡಿ, ಯರಗಟ್ಟಿ ಮತ್ತು ಸವದತ್ತಿ ತಾಲೂಕಿನಿಂದ ಬೆಂಗಳೂರಿಗೆ ಹೊರಡಲು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಪ್ರತಿಯೊಂದು ಸಮಾಜದ ಜನರು ಬೆಂಗಳೂರಿಗೆ ಬರುವವರ ಪಟ್ಟಿ ಮಾಡಿಕೊಡಬೇಕೆಂದರು. ಸಮಾಜದ ಪ್ರಮುಖರಾದ ಯರಗಟ್ಟಿಯ ಅಜಿತಕುಮಾರ ದೇಸಾಯಿಯವರು ಮತ್ತು ಹಿರೇಕುಂಬಿಯ ಅನೀಲ ಆಯಟ್ಟಿಯವರು ತಲಾ ಒಂದು ಬಸ್ಸಿನ ಸಂಪೂರ್ಣ ಖರ್ಚನ್ನು ವಹಿಸಿಕೊಂಡಿದ್ದು, ಪ್ರತಿ ಹೋಬಳಿಯಿಂದ ಒಂದು ಬಸ್ಸನ್ನು ಬೆಂಗಳೂರಿನ ಸಮಾವೇಶಕ್ಕೆ ಬಿಡುವಂತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು. ಪ್ರತಿಯೊಂದು ಗ್ರಾಮದಲ್ಲಿರುವ ಕ್ಷತ್ರಿಯ ಸಮಾಜ ಬಾಂಧವರು ಸಮಾವೇಶದ ಸಂಪೂರ್ಣ ಮಾಹಿತಿ ಪಡೆದುಕೊಂಡು ಬೆಂಗಳೂರಿಗೆ ಆಗಮಿಸಬೇಕೆಂದರು.
ರಜಪುತ ಸಮಾಜದ ಗಂಗಾರಾಮಸಿಂಗ್ ರಜಪುತ, ಪ್ರಕಾಶ ಇನಾಮದಾರ, ರಾಜು ಜೋರಾಪುರ, ಅರ್ಜುನ ಅಮ್ಮೋಜಿ, ಎಫ್.ಎ.ಕರೀಕಟ್ಟಿ, ಸುನೀಲ ಅಯಟ್ಟಿ, ಮಂಜುನಾಥ ನಿಕ್ಕಂ, ವಿ.ಜೆ.ಪವಾರ, ಕೇದಾರ ಮೊಕಾಶಿ, ನಿಂಗಪ್ಪ ಗೊರವನಕೊಳ್ಳ, ಸಾಬಣ್ಣ ವರವನ್ನವರ, ಸಂಭಾಜಿ ಶಿಂಧೆ, ಲಕ್ಷ್ಮಣ ಕಿಟದಾಳ, ರವಿ ಗಿರಿಜನ್ನವರ, ಸಿದ್ದಪ್ಪ ರಾಹುತ, ವಿಠ್ಠಲ ಜಾಮದಾರ, ಮಲ್ಲಿಕಾರ್ಜು ನ ಈರಪನ್ನವರ, ಶಿವಾಜಿ ಕುದರಿ ಸೇರಿದಂತೆ ಕ್ಷತ್ರಿಯ ಉಪಪಂಗಡಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಪ್ರಕಾಶ ಬಾಳೋಜಿ ಸ್ವಾಗತಿಸಿದರು. ಭೀಮರಾವ್ ಆನಿ ನಿರೂಪಿಸಿ ವಂದಿಸಿದರು