ಅಂಬಟಿ ರಾಯ್ಡು ಟ್ವಿಟಿಗೆ ಉತ್ತರ ಕೊಟ್ಟ ಬಸಿಸಿಐ
ಹೈದ್ರಾಬಾದ್ ಬ್ಯಾಟ್ಸ್ಮನ್ ಅಂಬಟಿ ರಾಯ್ಡು ಅವರ ಟ್ವಿಟ್ಟರ್ ಕೊನೆಗೂ ಬಿಸಿಸಿಐ ಉತ್ತರ ಕೊಟ್ಟಿದೆ.
ಮುಂಬರುವ ವಿಶ್ವಕಪ್ನಲ್ಲಿ ತಮಗೆ ಸ್ಥಾನ ನೀಡಿಲ್ಲ ಎಂದು ಸ್ಫೋಟಕ ಬ್ಯಾಟ್ಸ್ಮನ್ ಅಂಬಟಿ ರಾಯ್ಡು ಬೇಸರ ವ್ಯಕ್ತಪಡಿಸಿ ಈ ಬಾರಿಯ ವಿಶ್ವಕಪ್ನ್ನ 3ಡಿ ಕನ್ನಡಕ ಹಾಕಿಕೊಂಡು ನೋಡುತ್ತೇನೆ ಎಂದು ಟ್ವೀಟ್ ಮಾಡಿ ಬಿಸಿಸಿಐಯನ್ನ ವ್ಯಂಗ್ಯವಾಡಿದ್ದರು. ಈ ಟ್ವೀಟ್ ಭಾರತೀಯ ಕ್ರಿಕೆಟ್ನಲ್ಲಿ ಭಾರೀ ಚರ್ಚೆ ನಡೆದಿತ್ತು.
ಅಂಬಟಿ ರಾಯ್ಡು ಅವರನ್ನ ಕೈಬಿಟ್ಟಿದಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಸಮಥರ್ಿಸಿಕೊಂಡಿದ್ದರು. ಎರಡು ವರ್ಷದ ಹಿಂದೆ ಚಾಂಪಿಯನ್ಸ್ ಟ್ರೋಫಿ ನಂತರ ನಾಲ್ಕನೆ ಕ್ರಮಾಂಕದಲ್ಲಿ ಕೆಲವು ಆಟಗಾರರ ಮೇಲೆ ಪ್ರಯೋಗ ಮಾಡಿದೆವು. ದಿನೇಶ್ ಕಾರ್ತೀಕ , ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆ ಇವರನ್ನ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದೆವು. ಮೂರು ಕೋನದಲ್ಲೂ ರಾಯ್ಡು ಮತ್ತು ಶಂಕರ ಹೆಚ್ಚು ಅವಕಾಶ ಕೊಟ್ಟಿದ್ದೇವೆ. ಶಂಕರ್ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಒಳ್ಳೆ ಫೀಲ್ಡರ್ ಆಗಿದ್ದಾರೆ. ಈ ಕಾರಣಕ್ಕಾಗಿ ಶಂಕರಗೆ ನಾಲ್ಕನೆ ಕ್ರಮಾಂಕದಲ್ಲಿ ಆಡುವುದನ್ನ ಎದುರು ನೋಡುತ್ತಿದ್ದೇವೆ ಎಂದು ಎಂ.ಎಸ್.ಕೆ ಪ್ರಸಾದ್ ಹೇಳಿದ್ದಾರೆ.
ನಾವು ರಾಯ್ಡು ಅವರ ಟ್ವೀಟನ್ನ ಓದಿದ್ದೇವೆ. ಇಂಥ ಸಮಯದಲ್ಲಿ ಅವರ ಭಾವನೆಗಳನ್ನ ಪರಿಗಣನೆಗೆ ತೆಗೆದುಕೊಳ್ಳೋಣ. ಅವರ ನೋವನ್ನ ಮರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಅಂಬಟಿ ರಾಯ್ಡು ಹೆಚ್ಚುವರಿ ಆಟಗಾರರಾಗಿರೋದ್ರಿಂದ ಯಾರಾದರೂ ಗಾಯಗೊಂಡರೇ ಆಡಲು ಅವಕಾಶ ಸಿಗುತ್ತದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 