ಅಂತರರಾಷ್ಟ್ರೀಯ

ಉಕ್ರೇನ್ ಗೆ ನೆರವಾಗಲು ಝೆಲೆನ್ಸ್ಕಿ ಸಹಿ ಮಾಡಿದ ಬೇಸ್ ಬಾಲ್ ಹರಾಜು

ಉಕ್ರೇನ್ ಗೆ ನೆರವಾಗಲು ಝೆಲೆನ್ಸ್ಕಿ ಸಹಿ ಮಾಡಿದ ಬೇಸ್ ಬಾಲ್ ಹರಾಜು

ಕೀವ್ (ಉಕ್ರೇನ್) : ಏಪ್ರಿಲ್ 24: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹಿ ಮಾಡಿದ ಮೇಜರ್ ಲೀಗ್ ಬೇಸ್‌ಬಾಲ್ (MLB) ಬಾಲ್ ಅನ್ನು ಹರಾಜಿಗೆ ಹಾಕಲಾಗ್ತಿದೆ.  ಚೆಂಡಿನ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನ ಉಕ್ರೇನ್ ರಾಷ್ಟ್ರದ ಮೇಲೆ ರಷ್ಯಾ ನಡೆಯುತ್ತಿರುವ ಆಕ್ರಮಣದಿಂದ ನಾಶವಾಗಿರುವ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ.

ಮೇಜರ್ ಲೀಗ್ ಬೇಸ್‌ಬಾಲ್ ನ ಬಾಲ್ ಮೇಲೆ  ಝೆಲೆನ್ಸ್ಕಿ ಇಂಗ್ಲಿಷ್ ನಲ್ಲಿ ಸಹಿ ಮಾಡಿದ್ದಾರೆ. 2019 ರಲ್ಲಿ ಬಿಗ್ ಆಪಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಕ್ರೇನಿಯನ್ ಅಧ್ಯಕ್ಷರು ತಮ್ಮ ಹೆಸರನ್ನು ಚೆಂಡಿನ ಮೇಲೆ ಸಹಿ ಮಾಡಿದ್ದರು.

ಆರ್ ಆರ್  ಹರಾಜಿನ ಮೂಲಕ ಬೇಸ್‌ಬಾಲ್ ಮಾರಾಟಕ್ಕೆ ಹೋಗುತ್ತಿದೆ. ಚೆಂಡು ಕನಿಷ್ಠ $15,000 ಪಡೆಯುವ ನಿರೀಕ್ಷೆಯಿದೆ. ಹರಾಜು ಪಟ್ಟಿಯ ಪ್ರಕಾರ, ಬೇಸ್‌ಬಾಲ್ ಅತ್ಯಂತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿವರಿಸಲಾಗಿದೆ.

ನ್ಯೂಯಾರ್ಕ್‌ನಲ್ಲಿ ಸರ್ಕಾರಿ ವ್ಯವಹಾರಗಳ ತಜ್ಞರಾಗಿರುವ ರಾಂಡಿ ಎಲ್ ಕಪ್ಲಾನ್ ಅವರು ಯೆಲ್ಚೆಂಕೊ ಅವರಿಂದ ಉಡುಗೊರೆಯಾಗಿ ಪಡೆದ ಬೇಸ್‌ಬಾಲ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರ್‌ಆರ್ ಹರಾಜು ಘಟಕ ಮಾಹಿತಿ ನೀಡಿದೆ.  ಕಪ್ಲಾನ್ ಅವರು ಹರಾಜಿನ ಆದಾಯದ ಭಾಗವನ್ನು ಒಗ್ಗಟ್ಟಿನ ಕ್ರಿಯೆಯಾಗಿ ಉಕ್ರೇನಿಯನ್ ಪರಿಹಾರ ನಿಧಿಗೆ ದಾನ ಮಾಡಲು ಯೋಜಿಸಿದ್ದಾರೆ. ಮೇ 11 ರಂದು ಹರಾಜು ಪ್ರಕ್ರಿಯೆ ಮುಕ್ತಾಯವಾಗಲಿದೆ.

ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ರಕ್ಷಣಾ ಕಾರ್ಯಾಚರಣೆ ಘೋಷಿಸಿದ್ದು ಉಕ್ರೇನ್ ಸಾಕಷ್ಟು ನಷ್ಟ ಅನುಭವಿಸಿದ್ದು ತೀವ್ರ ಪೈಪೋಟಿ ನಡೆಸ್ತಿದೆ.

ಸುದ್ದಿ ಓದಿ