ಅಂತರರಾಷ್ಟ್ರೀಯ

ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಲು ಕೂದಲು ಕತ್ತರಿಸಿದ ಉಕ್ರೇನ್ ಯುವತಿಯರು!

ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಲು ಕೂದಲು ಕತ್ತರಿಸಿದ ಉಕ್ರೇನ್ ಯುವತಿಯರು!

ಕೈವ್: ಏಪ್ರಿಲ್ 09: ಒಂದು ತಿಂಗಳ ಹಿಂದೆ ರಷ್ಯಾ ತನ್ನ ದಾಳಿಯನ್ನು ಆರಂಭಿಸಿದಾಗಿನಿಂದ ಉಕ್ರೇನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಎಷ್ಟೋ ಸಾವು ನೋವುಗಳು ಸಂಭವಿಸಿದರೂ ಯುದ್ಧ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಯುದ್ಧದ ಭೀಭತ್ಸತೆ ಪ್ರತಿ ಜನರ ನರಳುವಿಕೆ ಮೂಲಕ ವ್ಯಕ್ತವಾಗುತ್ತಿದ್ದರೂ ಕೆಲವರು ಕಂಡರೂ ಕಾಣದಂತಿದ್ದಾರೆ. ಯುದ್ಧ ಕೇವಲ ಆಸ್ತಿ-ಪಾಸ್ತಿ ಹಾನಿ ಮಾತ್ರವಲ್ಲ. ಆ ನೆಲದ ಹೆಣ್ಣು ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರಿದೆ.

ಕೂದಲು ಸೌಂದರ್ಯದ ಪ್ರತೀಕ. ಆದರೆ ಇದೇ ಕೂದಲು ಹೆಣ್ನು ಮಕ್ಕಳ ಜೀವನ ನಾಶಕ್ಕೂ ನಿಂತಿದೆ. ಹೌದು ಇಲ್ಲಿನ ಹೆಣ್ನು ಕೂದಲಿದ್ದರೆ ಆಕರ್ಷಿತರಾಗಿ ಅತ್ಯಾಚಾರ ಘಟನೆಗಳು ನಡೆಯಬಹುದೆಂಬ ಕಾರಣಕ್ಕೆ ಕೂದಲನ್ನು ಕತ್ತರಿಸುತ್ತಿದ್ದಾರೆ. ಈ ಹಿಂದೆ ಕೆಲವು ಅತ್ಯಾಚಾರ ಘಟನೆಗಳು ನಡೆದ ಖಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಧಾನಿ ಕೈವ್ ನಿಂದ 50 ಮೈಲುಗಳಷ್ಟು ದೂರದಲ್ಲಿರುವ ಉಕ್ರೇನಿಯನ್ ಪಟ್ಟಣವಾದ ಇವಾನ್‌ಕಿವ್ ನಲ್ಲಿ, ರಷ್ಯಾದ ಪಡೆಗಳಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಲು ಯುವತಿಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುವಂತೆ ಒತ್ತಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕ್ರಮಿತ ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಲು ಯುವತಿಯರು ಆಕರ್ಷಕವಾಗಿ ಕಾಣಬಾರದೆಂಬ ಸಲುವಾಗಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಲು ಯೋಚಿಸಿದರು ಎಂದು ಪಟ್ಟಣದ ಉಪ ಮೇಯರ್ ಮೇರಿನಾ ಬೆಸ್ಚಾಸ್ಟ್ನಾ ಹೇಳಿದರು.

ಬೆಸ್ಚಸ್ಟಾ ರಷ್ಯಾದ ಸೈನಿಕರ ಕ್ರೌರ್ಯವನ್ನು ವಿವರಿಸಿದರು ಮತ್ತು ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಹದಿಹರೆಯದ ಸಹೋದರಿಯರನ್ನು ಅತ್ಯಾಚಾರ ಮಾಡಲಾಗಿದೆ ಎಂದು ಹೇಳಿದರು. ಹದಿಹರೆಯದ ಇಬ್ಬರು ಸಹೋದರಿಯರನ್ನು ಅವರ ಕೂದಲಿನಿಂದ ಎಳೆದು ತಂದು ತಮ್ಮ ನೆಲಮಾಳಿಗೆಯಿಂದ ಹೊರಹಾಕಲಾಯಿತು ಎಂದು ಹೇಳಿದರು

ಸುದ್ದಿ ಓದಿ