ಅಂತರರಾಷ್ಟ್ರೀಯ

ಅಮೆರಿಕಾದಲ್ಲಿ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಿರುವ ಯುವಕರು

ಅಮೆರಿಕಾದಲ್ಲಿ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಿರುವ ಯುವಕರು

ಬೆಂಗಳೂರು,ನ.20: ಅಮೆರಿಕಾ ಅಂದರೆ ಬಿಂದಾಸ್ ಲೈಫ್, ಸ್ವೇಚ್ಛಾಚಾರದ ಸೆಕ್ಸ್ ಬದುಕು ಅಂತೆಲ್ಲ ಹೇಳೋದುಂಟು. ಆದರೆ ಇತ್ತೀಚಿಗಿನ ಸಮೀಕ್ಷೆಯೊಂದು ಅಮೆರಿಕಾದಲ್ಲಿನ ಒಂದು ಬೆಚ್ಚುಬೀಳಿಸೋ ಸಂಗತಿಯನ್ನ ಬಿಚ್ಚಿಟ್ಟಿದೆ.

ಅದು ಕೂಡ ಲೈಂಗಿಕತೆ ಬಗ್ಗೆ. ಹೌದು, ದೊಡ್ಡಣ್ಣ ಅಮೆರಿಕಾದಲ್ಲಿ ಯುವಕರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರಂತೆ.

ಹೀಗೆ ಯುವಕರು ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಿರೋದಕ್ಕೆ ಈ ಸಮೀಕ್ಷೆ ಕಾರಣವನ್ನೂ ನೀಡಿದೆ.ಅಂಕಿಅಂಶಗಳ ಪ್ರಕಾರ ಸಂಗಾತಿಯೊಂದಿಗೆ ವಾಸಿಸುತ್ತಿದ್ದರೂ ಯುವಕರು ಲೈಂಗಿಕತೆಯಲ್ಲಿ ಹೆಚ್ಚು ತೊಡಗಿಸಿಕೊಳ್ತಿಲ್ವಂತೆ. ಅಲ್ಲದೇ ದೈಹಿಕ ಸಂಬಂಧದದಲ್ಲಿ ಆಸಕ್ತಿ ತೋರಿಸುತ್ತಿಲ್ಲಾಂತ ಸಮೀಕ್ಷೆ ಹೇಳಿದೆ.

ಅಮೆರಿಕದ ಜನರಲ್ಲಿ ಸೆಕ್ಸ್ ಮಾಡುವ ಬಯಕೆ ನಿರಂತರವಾಗಿ ಕಡಿಮೆಯಾಗುತ್ತಿರೋದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಅಧ್ಯಯನ ಹೇಳುವ ಪ್ರಕಾರ 2011 ರಿಂದ ಲೀವ್ ಇನ್ ರಿಲೇಷನ್ಷಿಪ್ ಸಂಬಂಧಗಳನ್ನು ಹೊಂದುವ ಯುವಕರ ಸಂಖ್ಯೆ 40%ರಿಂದ 32%ಗೆ ಕಡಿಮೆಯಾಗಿದೆ.ನ್ನೂ ವಿವಾಹಿತರನ್ನು ಲೈಂಗಿಕವಾಗಿ ಸಕ್ರಿಯರೆಂದು ಪರಿಗಣಿಸಲಾಗುತ್ತದೆ.ಸಮೀಕ್ಷೆಯಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ 25 ವರ್ಷಕ್ಕಿಂತ ಮಹಿಳೆಯರಲ್ಲಿ ಸಹ ಆಸಕ್ತಿ ಕಡಿಮೆಯಾಗಿದೆ. ವರ್ಷಗಳ ಹಿಂದೆ 20 ರಲ್ಲಿ ಒಬ್ಬರೂ ಮಾತ್ರ ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ವರದಿ ಹೇಳಿದೆ.

ಸಾಂಕ್ರಾಮಿಕ ಕೊರೋನಾದಿಂದಾಗಿ ಜನರ ಲೈಂಗಿಕ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹೀಗೆ ಯುವಕರು ಲೈಂಗಿಕತೆಯಿಂದ ದೂರವಿರೋಕೆ ಕಾರಣವನ್ನು ಅಮೆರಿಕನ್ ಸಮಾಜಶಾಸ್ತ್ರಜ್ಞರು ಮತ್ತು ಮನ:ಶಾಸ್ತ್ರಜ್ಞರು ಪತ್ತೆಮಾಡಲು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ.ಸ್ಕೌಟ್ ಸೌತ್ ಮತ್ತು ಲೀಲೀ ತಮ್ಮ ಅಧ್ಯಯನವೊಂದರಲ್ಲಿ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದು, ಧೀರ್ಘಾವಧಿಯ ಸಂಬಂಧದ ಕೊರತೆ, ಮದುವೆ ಅಥವಾ ಇತರ ಸಾಮಾಜಿಕ ಪದ್ಧತಿಗಳಿಂದ ದೂರ, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಅತಿಯಾದ ಮದ್ಯಪಾನ, ವಿಡಿಯೋ ಗೇಮ್ ಚಟ, ಪೋರ್ನ್ ವೀಕ್ಷಣೆ, ಅಶ್ಲೀಲತೆಯಂತಹ ವಿಷಯಗಳು ಲೈಂಗಿಕ ಜೀವನವನ್ನು ಹಾಳು ಮಾಡೋ ಕೆಲಸ ಮಾಡುತ್ತವೆ ಅಂತ. 

ತಜ್ಞರ ಪ್ರಕಾರ, ಕೊರೋನಾದಿಂದ ಪ್ರತ್ಯೇಕವಾಗಿರುವವರು ಈ ಅಭ್ಯಾಸಗಳಿಗೆ ಮತ್ತಷ್ಟು ಅಂಟಿಕೊಂಡಿದ್ದು, ಒಂಟಿಯಾಗಿ ಬದುಕುವ ಹವ್ಯಾಸವೂ ಜನರಲ್ಲಿ ಹೆಚ್ಚುತ್ತಿದೆ.

ಸುದ್ದಿ ಓದಿ