ಯೋಗಿ ಆದಿತ್ಯನಾಥ್ ನನ್ನ ‘ಕೊಲ್ಲಲು’ ಬಯಸುತ್ತಿದ್ದಾರೆ: ಎಸ್‌ಬಿಎಸ್ ಪಿ ಮುಖ್ಯಸ್ಥ ಆರೋಪ
ಪಾಟ್ನಾ15: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮಧ್ಯೆ, ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್ ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಘಾತಕಾರಿ ವಿಚಾರ ಬಹಿರಂಗಗೊಳಿಸಿದ್ದಾರೆ.ವಾರಣಾಸಿಯ ಶಿವಪುರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಅರವಿಂದ್ ರಾಜ್‌ಭರ್ ಸೋಮವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಹಲ್ಲೆ ನಡೆಸಲಾಗಿದೆ ಎಂದು ಓಂ ಪ್ರಕಾಶ್ ರಾಜ್‌ಭರ್ ಆರೋಪಿಸಿದರು ಮತ್ತು ಯೋಗಿ ಆದಿತ್ಯನಾಥ್ ನನ್ನನ್ನು ‘ಕೊಲ್ಲಲು’ ಬಯಸುತ್ತಿದ್ದಾರೆ ಎಂದು ಹೇಳಿದರು.“ಯೋಗಿ ಜಿ ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಕಪ್ಪು ಕೋಟ್ ಧರಿಸಿದ ಗೂಂಡಾಗಳನ್ನು ಬಿಜೆಪಿ ಮತ್ತು ಯೋಗಿ ಅಲ್ಲಿಗೆ ಕಳುಹಿಸಿದ್ದಾರೆ ಎಂದು ಆರೋಪಿದ ಅವರು ತನಗೆ ಮತ್ತು ಅರವಿಂದ್ ರಾಜ್‌ಭರ್ ಗೆ ಭದ್ರತೆ ಒದಗಿಸುವಂತೆ ಓಂ ಪ್ರಕಾಶ್ ರಾಜ್‌ಭರ್ ಭಾರತ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.ಯುಪಿಯಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಮಿತ್ರ ಪಕ್ಷವಾಗಿರುವ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷವು ಪ್ರಸ್ತುತ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಮೈತ್ರಿಯೊಂದಿಗೆ ಹೋರಾಡುತ್ತಿದೆ ಎಂಬುದು ಗಮನಾರ್ಹ.2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, SBSP ನಾಲ್ಕು ಸ್ಥಾನಗಳನ್ನು ಗೆದ್ದಿತ್ತು ಮತ್ತು ರಾಜ್ಭರ್ ಸ್ವತಃ ಗಾಜಿಪುರ ಜಿಲ್ಲೆಯ ಜಹೂರಾಬಾದ್‌ನಿಂದ ಚುನಾಯಿತರಾಗಿದ್ದರು. ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದರು ಆದರೆ 2019 ರಲ್ಲಿ ಕ್ಯಾಬಿನೆಟ್ ಅನ್ನು ತೊರೆದಿದ್ದರು.