ಅಂತರರಾಷ್ಟ್ರೀಯ

ಯೆಮನ್‌ ; ವೈಮಾನಿಕ ದಾಳಿ ಕನಿಷ್ಟ 60 ಮಂದಿ ಬಲಿ – ವಿಶ್ವಸಂಸ್ಥೆ ಖಂಡನೆ

ಯೆಮನ್‌ ; ವೈಮಾನಿಕ ದಾಳಿ ಕನಿಷ್ಟ 60 ಮಂದಿ ಬಲಿ – ವಿಶ್ವಸಂಸ್ಥೆ ಖಂಡನೆ

ಸಾದಾ, ಜ 22) – ಯೆಮೆನ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ಮಂದಿ ಬಲಿಯಾಗಿದ್ದಾರೆ. ಯಮನ್‌ ನ ಸಾದಾ ನಗರದ ಡಿಟೆನ್ಷನ್‌ ಕೇಂದ್ರದ ಮೇಲೆ ನಡೆದ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ.

ವೈಮಾನಿಕ ದಾಳಿಯಿಂದ ಉರುಳಿ ಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಮೃದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ವೈಮಾನಿಕ ದಾಳಿಯಲ್ಲಿ 60 ಕ್ಕೂ ಹೆಚ್ಚು ವಯಸ್ಕರು ಸಾವನ್ನಪ್ಪಿದ್ದಾರೆ ಎಂದು ಸೇವ್ ದಿ ಚಿಲ್ಡ್ರನ್ ಹೇಳಿದೆ.
ಪಶ್ಚಿಮ ನಗರದ ಹೊಡೆಡಾದಲ್ಲಿ ಕ್ಷಿಪಣಿ ದಾಳಿಗೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ವಾಯು ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಓದಿ