ಕಮಲ ಬಿಟ್ಟು ಕೈ ಹಿಡಿದ ಯಡಿಯೂರಪ್ಪನ ಆಪ್ತ ಮೋಹನ ಲಿಂಬಿಕಾಯಿ : ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ
ಬೆಳಗಾವಿ : ರಾಜ್ಯ ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟಿದ ವಾತಾವರಣ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನಮಾನ ನೀಡದೆ. ಜನರಿಗೆ ಮನ್ನನೆ ನೀಡದೆ ಇರದೆ, ಜನ ವಿರೋದಿ ನಡೆಯಿಂದ ಬೇಸತ್ತು. ಯಾವದೇ ಕರಾರು, ಶರ್ತು ರಹಿತವಾಗಿ ನಾನು ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ಇಂದು ಬಿಜೆಪಿ ಪಕ್ಷ ತೋರೆದು ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬೆಕಾಯಿ ಇಂದಿಲ್ಲಿ ಹೇಳಿದರು.
ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ರಾಜ್ಯ ಕಾಂಗ್ರೆಸ ಉಸ್ತುವಾರಿ ರಣದೀಪ್ ಸಿಂಗ ಸುರ್ಜೇವಾಲಾ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ ಅವರ ಸಮ್ಮುಖದಲ್ಲಿ ಮೋಹನ ಲಿಂಬಿಕಾಯಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ತೆಂಗಿನಕಾಯಿ ಅವರು, ನಾನು ಬಿಜೆಪಿಯಲ್ಲಿ ಶಿಸ್ತಿನ ಶಿಪಾಯಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ನನ್ನ ಯಾರು ಗುರುತಿಸಲಿಲ್ಲ. ಅಲ್ಲದೆ ಬಿಜೆಪಿಯಲ್ಲಿ ಪ್ರಾಮಾಣಿವಾಗಿರುವ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ.
ಇದರಿಂದ ರಾಜ್ಯ ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾವಾಗಿದೆ. ಇದರಿಂದ ಬೇಸತ್ತು ನಾನು ಕಾಂಗ್ರೆಸ ಪಕ್ಷದ ಯಾವದೇ ಆಸೆ ಅಥವ ಶರ್ತು ಇಲ್ಲದೆ ಕಾಂಗ್ರೆಸ್ ಸೇರಿದ್ದೇನೆ ಎಂದು ನುಡಿದರು. ಅಲ್ಲದೆ ಕಾಂಗ್ರೆಸ್ ಪಕ್ಷವು ನನಗೆ ಯಾವದೇ ಜವಬ್ದಾರಿ ನೀಡಿದರು ನಿರ್ವಹಿಸಲು ಸಿದ್ದ ಎಂದು ಮೋಹನ ಲಿಂಬಿಕಾಯಿ ಹೇಳಿದರು.