ಅಂತರರಾಷ್ಟ್ರೀಯ

ಅಬ್ಬಾ ! ಮಹಿಳೆ ಕಿವಿಯೊಳಗೆ ಜೇಡ: ಶಾಕ್​ ಆದ ವೈದ್ಯರು

ಅಬ್ಬಾ ! ಮಹಿಳೆ ಕಿವಿಯೊಳಗೆ ಜೇಡ: ಶಾಕ್​ ಆದ ವೈದ್ಯರು

ಬೀಜಿಂಗ್​​: ಅ, 24  ಚೀನಾದ ಯಿ ಎಂಬ ಮಹಿಳೆ ಕಿವಿ ನೋವು ಎಂದು ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಆಕೆಯ ಕಿವಿಯನ್ನು ಪರೀಕ್ಷಿಸಿರುವ ವೈದ್ಯರು ಒಂದು ಕ್ಷಣ ದಂಗಾಗಿದ್ದಾರೆ.


ಹೌದು, ಕಿವಿನೋವು ಎಂದು ಆಸ್ಪತ್ರೆಗೆ ಬಂದ ಆಕೆಯ ಕಿವಿಯಲ್ಲಿ ಜೀವಂತ ಜೇಡ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಆ ಜೇಡ ಕಿವಿಯಲ್ಲಿ ಬಲೆಯನ್ನು ಕೂಡ ಹೆಣೆಯುತ್ತಿತ್ತು. ಈ ಘಟನೆ ಚೀನಾದ ದಕ್ಷಿಣದಲ್ಲಿರುವ ಹುನಾನ್​ ಪ್ರಾಂತ್ಯದ ಝೂಝೂ ಎಂಬ ಪ್ರದೇಶದಲ್ಲಿ ನಡೆದಿದೆ.


ಈ ಜೇಡ ಯುವತಿಯ ಕಿವಿಯಲ್ಲಿ ಒಂದು ದಿನ ಜೀವಂತವಾಗಿದೆ. ಆದಾಗ್ಯೂ ಆಕೆಯ ಕಿವಿಯ "ಟೈಂಪನಿಕ್ ಮೆಂಬರೇನ್" ಮೇಲ್ಮೈಯಲ್ಲಿ ಜೇಡವು ತೆವಳುತ್ತಿರುವುದನ್ನು ವೈದ್ಯರು ನೋಡಿದ್ದಾರೆ. ಬಳಿಕ  ಕಿವಿಯೊಳಗೆ ಕ್ಯಾಮೆರಾವನ್ನು ಇರಿಸಿದಾಗ, ಅದರ ಒಳಗೆ ದೊಡ್ಡದಾದ ಜೇಡ ಓಡಾಡುತ್ತಿರುವುದು ಕಂಡುಬಂದಿದೆ.


ಎಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿ ವೈದ್ಯರು ಜೇಡವನ್ನು ತೆಗೆದಿದ್ದಾರೆ. ಇದು ವೈದ್ಯರು ಜನರ ಕಿವಿ ಒಳಗೆ ನೋಡಲು ಬಳಸುವ ಸಾಧನವಾಗಿದೆ.

ಸುದ್ದಿ ಓದಿ