ಕೆಎಲ್ಇ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗದಿನ
ಲೋಕದರ್ಶನ ವರದಿ
ಮಹಾಲಿಂಗಪುರ 21 : ಕೆಎಲ್ಇ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗದಿನ ಆಚರಿಸಲಾಯಿತು. ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಮತ್ತು ಧ್ಯಾನದಲ್ಲಿ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ವೈ.ಎಸ್.ಜಗದಾಳ ಮಾರ್ಗದರ್ಶನ ಮಾಡಿದರು. ಸಪನಾ ಅನಿಗೋಳ ವಿವರಿಸಿದರು. ಅಂಗಸಂಸ್ಥೆಗಳ ಮುಖ್ಯಸ್ಥರಾದ ಎನ್.ಬಿ.ಪಾಟೀಲ, ಎಲ್.ಬಿ.ತುಪ್ಪದ, ಬಿ.ಎನ್.ಅರಕೇರಿ, ಅಮೀತ ಚಮಕೇರಿ ಇದ್ದರು.