ಅಂತರರಾಷ್ಟ್ರೀಯ

ಐರೋಪ್ಯ ದೇಶಗಳಲ್ಲಿ ಕೋವಿಡ್ ಸೋಂಕು ತೀವ್ರ..ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಐರೋಪ್ಯ ದೇಶಗಳಲ್ಲಿ  ಕೋವಿಡ್  ಸೋಂಕು  ತೀವ್ರ..ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನಿವಾ, ನ ೬: ಯೂರೋಪ್ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಇದೇ ರೀತಿಯಲ್ಲಿ ಏರಿಕೆಯಾದರೆ ಫೆಬ್ರವರಿ ವೇಳೆಗೆ ಅರ್ಧ ಮಿಲಿಯನ್ ಜನರು ಕೋವಿಡ್‌ನಿಂದಾಗಿ ಸಾವನ್ನಪ್ಪಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. 

ಡಬ್ಲ್ಯೂಎಚ್‌ಒದ ಯೂರೋಪ್‌ನ ಮುಖ್ಯಸ್ಥ ಹಾನ್ಸ್ ಕ್ಲೂಗೆ, ಲಸಿಕೀಕರಣ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಲಾಗದ ಕಾರಣ ಸೋಂಕು ಏರಿಕೆಯಾಗಿದೆ ಎಂದು ದೂಷಿಸಿದ್ದಾರೆ. 

ಸ್ಪೇನ್‌ನಲ್ಲಿ ಶೇಕಡ ೮೦ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಜರ್ಮನಿಯಲ್ಲಿ ಶೇಕಡ ೬೬ರಷ್ಟು ಹಾಗೂ ರಷ್ಯಾದಲ್ಲಿ ಕೇವಲ ಶೇಕಡ ೩೨ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. 

ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ಸಡಿಲಿಕೆ ಮಾಡಿದ್ದರಿಂದ ಐರೋಪ್ಯ ರಾಷ್ಟ್ರಗಳಲ್ಲಿ ಸೋಂಕು ಅಧಿಕವಾಗಿದೆ ಎಂದು ಅವರು ಹೇಳಿದ್ದಾರೆ. 

ಸುದ್ದಿ ಓದಿ