ವಿಶ್ವ ಆರೋಗ್ಯ ಸಂಸ್ಥೆ ಸಚಿವರ ಸಮ್ಮೇಳನ ಮುಂದೂಡಿಕೆ
ಜಿನೀವಾ, ನ 27 ಕೋವಿಡ್ -19 ಸಾಂಕ್ರಾಮಿಕದ ಹೊಸ ರೂಪಾಂತರಿ ಹರಡುವಿಕೆಯಿಂದಾಗಿ ವಿಶ್ವ ವ್ಯಾಪಾರ ಸಂಸ್ಥೆಯ 12 ನೇ ಸಚಿವರ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆಯ ಉಪ ಮಹಾನಿರ್ದೇಶಕ ಅನಾಬೆಲ್ ಗೊನ್ಜಾಲೆಜ್ ಹೇಳಿದ್ದಾರೆ.
ಸಚಿವರ ಸಮ್ಮೇಳನ ಮುಂದೂಡಲಾಗಿದೆ. ಈ ನಿರ್ಧಾರದ ಹಿಂದೆ ಒಮ್ಮತದ ಬೆಂಬಲವಿದೆ. ಆರೋಗ್ಯ ದೃಷ್ಟಿಯಿಂದ ಇದು ಸರಿಯಾದ ನಿರ್ಧಾರ. ವಿಶ್ವ ವ್ಯಾಪಾರ ಸಂಸ್ಥೆಯ ಕೆಲಸ ಮುಂದುವರಿಯುತ್ತದೆ, ಮುಂದುವರೆಯಬೇಕು, ಎಂದು ಗೊನ್ಜಾಲೆಜ್ ಶುಕ್ರವಾರ ತಡ ರಾತ್ರಿ ತನ್ನ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ವಿಶ್ವ ವ್ಯಾಪಾರ ಸಂಸ್ಥೆಯ ಬ್ರಿಟನ್ ಖಾಯಂ ಪ್ರತಿನಿಧಿ ಸೈಮನ್ ಮ್ಯಾನ್ಲಿ ಸಂಸ್ಥೆಯ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
"ಮುಂದಿನ ವಾರ ನಡೆಯಬೇಕಿದ್ದ ಸಚಿವರ ಸಮ್ಮೇಳನ ಮುಂದೂಡುವಿಕೆ ಆರೋಗ್ಯ ಪರಿಸ್ಥಿತಿ ಹಾಗೂ ಎಲ್ಲಾ ನಿಯೋಗಗಳು ಸಭೆಗೆ ಹಾಜರಾಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಇದೊಂದು ಬುದ್ಧಿವಂತ ನಿರ್ಧಾರ ಎಂದು "ಮ್ಯಾನ್ಲಿ ಟ್ವೀಟ್ ಮಾಡಿದ್ದಾರೆ.
ಹೊಸ ರೂಪಾಂತರ, B.1.1.529, ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದು ಜಗತ್ತಿನಾದ್ಯಂತ ಕಳವಳಕ್ಕೆ ಕಾರಣವಾಗಿದೆ.