ಅಂತರರಾಷ್ಟ್ರೀಯ

ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ ವಿಶ್ವ ಬ್ಯಾಂಕ್

ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ ವಿಶ್ವ ಬ್ಯಾಂಕ್

ವಾಷಿಂಗ್ಟನ್: ಫೆಬ್ರವರಿ 25: ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಇಂದಿಗೆ ಎರಡನೇ ದಿನ. ಈ ಸಂಘರ್ಷದ ಮಧ್ಯೆ ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ವಿಶ್ವ ಬ್ಯಾಂಕ್ ಮುಂದೆ ಬಂದಿದೆ.

ಉಕ್ರೇನ್ ಗೆ ತಕ್ಷಣದ ಆರ್ಥಿಕ ನೆರವು ನೀಡಲು ವಿಶ್ವ ಬ್ಯಾಂಕ್ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.

ವಿಶ್ವಬ್ಯಾಂಕ್ ಉಕ್ರೇನ್‌ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧವಾಗಿದೆ ಮತ್ತು ವೇಗದ-ಹಂಚಿಕೆ ಹಣಕಾಸು ಸೇರಿದಂತೆ ಇಂತಹ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದ್ದೇವೆ. ಅಭಿವೃದ್ಧಿ ಪಾಲುದಾರರ ಜೊತೆಗೆ, ವಿಶ್ವ ಬ್ಯಾಂಕ್ ಸಮೂಹವು ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲವನ್ನು ಅತ್ಯಂತ ವೇಗವಾಗಿ ತಲುಪುವಂತೆ ಮಾಡಲಿದ್ದೇನೆ ಎಂದು ಮಾಲ್ಪಾಸ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್ ಪ್ರಸ್ತುತ ಉಕ್ರೇನ್‌ನ ನೆರೆಹೊರೆಯವರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಉಕ್ರೇನ್ ಅನ್ನು ಬೆಂಬಲಿಸಲು ಮತ್ತು ಹೆಚ್ಚುವರಿ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತದೆ ಎಂದು ಮಾಲ್ ಪಾಸ್ ಹೇಳಿದರು.

ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯು ಉಕ್ರೇನ್‌ನ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ ಮತ್ತು ನಾಗರಿಕರಿಗೆ ಅಪಾಯವಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮಾಸ್ಕೋ ಹೇಳಿದೆ.

ಸುದ್ದಿ ಓದಿ