ವಿಶ್ವದ ಬಲಿಷ್ಠ ಬಾಲಕಿ …. ಆಕೆಯ ಪಂಚ್ ತಗುಲಿದರೆ ಫಿನಿಷ್..!
ಮಾಸ್ಕೋ, ಜ 10 ಕೆಲವು ಪುಟ್ಟ ಹುಡುಗಿಯರು ಬಾಲ್ಯದಲ್ಲಿಯೇ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಅತ್ಯಂತ ವೇಗವಾಗಿ ಕಲಿಯುವುದು ಮಾತ್ರವಲ್ಲದೆ ಅತ್ಯುತ್ತಮ ಜ್ಞಾಪಕಶಕ್ತಿಯನ್ನೂ ಹೊಂದಿರುತ್ತಾರೆ. ಆದರೆ, ಇಲ್ಲೊಬ್ಬ ಹುಡುಗಿ ತುಂಬಾ ಚಿಕ್ಕ ವಯಸ್ಸಿನಲ್ಲೇ ಉತ್ತಮ ಬಾಕ್ಸರ್ ಆಗಿರುವುದು ಮಾತ್ರವಲ್ಲದೆ ವಿಶ್ವದ ಬಲಿಷ್ಠ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ
ವಾಸ್ತವವಾಗಿ … ರಷ್ಯಾದ ರುಸ್ಟ್ರಾಮ್ ಸದ್ವಾಕಸ್ ಎಂಬ ಬಾಕ್ಸರ್ ಗೆ 12 ವರ್ಷದ ಇವಿಂಕಾ ಸವಕಾಸ್ ಎಂಬ ಮಗಳಿದ್ದಾಳೆ. ಆಕೆ ಬಾಲ್ಯದಿಂದಲೂ ತನ್ನ ತಂದೆ ರುಸ್ಟ್ರಾಮ್ ಬಳಿ ಬಾಕ್ಸಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ. ಆದರೆ, ಅವರು ತಮ್ಮ ಮಗಳ ಪ್ರತಿಭೆಯನ್ನು ನಾಲ್ಕನೇ ವಯಸ್ಸಿನಲ್ಲಿ ಗುರುತಿಸಿದ್ದಾರೆ. ಮೇಲಾಗಿ ಇವಿಂಕಾ ತನಗಿಂತಲೂ ಹಿರಿಯ ವಿದ್ಯಾರ್ಥಿಗಳು ತೆಗೆದುಕೊಳ್ಳುವ ತರಬೇತಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಸುಮಾರು 100 ಪಂಚ್ ನೀಡುತ್ತಾಳೆ ಎಂದು ಅವರು ತಿಳಿಸಿದ್ದಾರೆ.
ಬಾಲಕಿ ತನ್ನ ಬಲಿಷ್ಟ ಪಂಚ್ ಗಳಿಂದ ಮರಗಳು, ಕಬ್ಬಿಣದ ಬಾಗಿಲುಗಳನ್ನು ನಿರಾಯಾಸವಾಗಿ ಕೆಡವುತ್ತಾಳೆ. ಇದರಿಂದ ಈ ಬಾಲಕಿ ವಿಶ್ವದ ಅತ್ಯಂತ ಬಲಿಷ್ಠ ಬಾಲಕಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾಳೆ. ತಮ್ಮ ಬಾಕ್ಸಿಂಗ್ ಪ್ರಾವೀಣ್ಯತೆಯಿಂದ ಮರಗಳು ಹಾಗೂ ಕಬ್ಬಿಣದ ಬಾಗಿಲು ಕೆಡವುತ್ತಿರುವ ವಿಡಿಯೋಗಳನ್ನು ಟ್ವಿಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಈ ವೀಡಿಯೋಗಳು ನೆಟ್ಟಿಗರನ್ನು ಹಲ್ ಚಲ್ ಮಾಡುತ್ತಿವೆ