ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ `ಸ್ಮಾರಕ ರಾಷ್ಟ್ರೀಯ ಧ್ವಜ’ ಪ್ರದರ್ಶನ
ಜೈಸಲ್ಮೇರ್: ಜನೆವರಿ 15 74ನೇ ಸೇನಾ ದಿನಾಚರಣೆಯ ಅಂಗವಾಗಿ, ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ `ಸ್ಮಾರಕ ರಾಷ್ಟ್ರೀಯ ಧ್ವಜ’ವನ್ನು ಶನಿವಾರ ರಾಜಸ್ಥಾನದ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರದರ್ಶಿಸಲಾಯಿತು. ಲಾಂಗೆವಾಲಾ 1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಕೇಂದ್ರ ಆಗಿತ್ತು.
ದಕ್ಷಿಣ ಕಮಾಂಡ್ ಜೈಸಲ್ಮೇರ್ ಮಿಲಿಟರಿ ನಿಲ್ದಾಣದಲ್ಲಿ 225 ಅಡಿ 150 ಅಡಿ ಗಾತ್ರದ ಧ್ವಜವನ್ನು ಅನಾವರಣಗೊಳಿಸಿತು. ಒಟ್ಟು 33, 750 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಧ್ವಜವನ್ನು ತಯಾರಿಸಲು 4500 ಮೀಟರ್ ಕೈಯಿಂದ ನೇಯ್ದ ಖಾದಿ ಹತ್ತಿ ಬಟ್ಟೆಯನ್ನು ಬಳಸಲಾಗಿದೆ.
ಧ್ವಜದಲ್ಲಿರುವ ಅಶೋಕ ಚಕ್ರವು 30 ಅಡಿ ವ್ಯಾಸವನ್ನು ಹೊಂದಿದೆ. ಇದರ ತೂಕ ಸುಮಾರು 1,400 ಕೆ.ಜಿ. ಖಾದಿ ಡೈಯರ್ಸ್ ಮತ್ತು ಪ್ರಿಂಟರ್‍ಗಳಿಂದ ತಯಾರಿಸಲ್ಪಟ್ಟ ಈ ಧ್ವಜವು ಭಾರತೀಯ ಪರಂಪರೆಗೆ ಸೂಕ್ತವಾದ ಗೌರವ ಎಂದು ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಧ್ವಜಾರೋಹಣವು 75ನೇ ವರ್ಷದ ಭಾರತ ಸ್ವಾತಂತ್ರ್ಯೋತ್ಸವವನ್ನು `ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ಹೆಸರಿನಲ್ಲಿ ಆಚರಿಸುವುದನ್ನು ಸ್ಮರಿಸುತ್ತದೆ. ಜಿಒಸಿ 12 ರ್ಯಾಪಿಡ್ ಆಯ್ದ ಗಣ್ಯರ ನಡುವೆ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಯಿತು.