ಚಿಕನ್ ಫ್ಯಾಕ್ಟರಿಯಲ್ಲಿ ಹೃದಯ ಘಾತದಿಂದ ಕಾರ್ಮಿಕನ ಸಾವು: ಸಿಡಿದೆದ್ದ ಪ್ರತಿಭಟನಾಕಾರರ ಎಚ್ಚರಿಕೆಗೆ ಮಣಿದ ಆಡಳಿತ ಮಂಡಳಿ
Worker dies of heart attack at chicken factory
ರಾಣೇಬೆನ್ನೂರು 27 : ಚಿಕನ್ ಫ್ಯಾಕ್ಟರಿಯಲ್ಲಿರುವ ಅತ್ಯಾಧಿಕ ಕೋಲ್ಡ್ ಸ್ಟೋರೇಜ್‌ನಲ್ಲಿ ಮೈನಸ್ 20 ಡಿಗ್ರಿ ಟೆಂಪರೇಚರಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಕ್ತ ಹೆಪ್ಪುಗಟ್ಟುವಂತದ್ದು ಆ ಸಂಬಂಧವಾಗಿ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳಿಂದ ಆ ಕಾರ್ಮಿಕರು ಬಳಲುತ್ತಿದ್ದು ಅಂತದೇ ಕೆಲಸ ನಿರ್ವಹಿಸುವಾಗ ಈ ಕಾರ್ಮಿಕ ಹಾರ್ಟಅಟ್ಯಾಕ್ ಆಗಿ ಸಾವನ್ನಪ್ಪಿದ್ದು ಅನ್ಯಾಯದ ಈ ಸಾವಿಗೆ ನ್ಯಾಯ ಸಿಗುವ ತನಕ ಈ ಜಾಗ ಬಿಟ್ಟು ಹೋಗೊದಿಲ್ಲ ಮೃತ ಕಾರ್ಮಿಕನ ಶವವನ್ನು ಒಯ್ಯದೆ ಆ ಶವದೊಂದಿಗೆ ಆತನ ಕುಟುಂಬಸ್ಥರನ್ನು ಕಂಪನಿಯ ಕಾರ್ಮಿಕರನ್ನು ಕಟ್ಟಿಕೊಂಡು ಹೋರಾಟ ಮುಂದುವರೆಸುತ್ತೇವೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಎಚ್ಚರಿಸಿದರು.
ಅವರು ಗುರುವಾರ ಮುಂಜಾನೆ 11 ಗಂಟೆಯ ಸುಮಾರಿಗೆ ತಾಲೂಕಿನ ತರೇದಹಳ್ಳಿ ಗ್ರಾಮದ ಹತ್ತಿರ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಪ್ರೈ. ಲಿ. ನ (ಕೋಳಿ ಮಾಂಸ ತಯಾರಿಕ ಘಟಕ) ದಲ್ಲಿ ಕಂಪನಿಯ ಕೋಲ್ಡ್ ಸ್ಟೋರೇಜ್‌ನಲ್ಲಿ ಕಳೆದ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಖಂಡೇರಾಯನಹಳ್ಳಿ ಗ್ರಾಮದ ದುರಗಪ್ಪ ಮಾಳಮ್ಮನವರ (41) ಎಂಬ ಕಾರ್ಮಿಕ ಕರ್ತವ್ಯದಲ್ಲಿ ಇರುವಾಗಲೇ ಹಾರ್ಟಆಟ್ಯಾಕ್ ಆಗಿ ಸಾವನ್ನಿಪ್ಪಿದ್ದು ಈ ಸಾವಿಗೆ ಕಂಪನಿಯಲ್ಲಿರುವ ಅತ್ಯದಿಕ ಕೋಲ್ಡ್ ಸ್ಟೋರೇಜ್ ಕಾರಣವಾಗಿದ್ದು ಈ ಅನ್ಯಾಯದ ಸಾವಿಗೆ ಸೂಕ್ತ ಪರಿಹಾರ ಸಿಗುವ ತನಕ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ನ್ಯಾಯಕ್ಕಾಗಿ ಮೃತ ಕಾರ್ಮಿಕ ದುರಗಪ್ಪನ ಕುಟುಂಬಸ್ಥರು ಮತ್ತು ಕಂಪನಿಯ ಎಲ್ಲಾ ಕಾರ್ಮಿಕರು ಮೃತನ ಶವವನ್ನು ಇಟ್ಟುಕೊಂಡು ಕಂಪನಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿದರು.
ಅವರು ಕಳೆದ 20 ವರ್ಷಗಳ ಹಿಂದೆ ಅತ್ಯಂತ ಕಡಿಮೆ ದರದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೊಂಡು ಉದ್ಯೋಗ ಸೃಷ್ಟಿಸುತ್ತೇವೆ ಎಂಬ ಭರವಸೆಯನ್ನು ಸರಕಾರಕ್ಕೆ ನೀಡಿ ಅನುಮತಿ ಪಡೆದು ನದೀನೀರು, ಸಾರಿಗೆ ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಉಪಯೋಗ ಪಡೆದು ಏಷ್ಯಖಂಡದಲ್ಲಿಯೇ ಅತ್ಯಂತ ಹೆಸರು ಮಾಡಿ ಸಾಕಷ್ಟು ಆರ್ಥಿಕ ಅಭಿವೃದ್ಧಿ ಹೊಂದಿರುವ ಈ ಫ್ಯಾಕ್ಟರಿಯ ಆಡಳಿತ ಮಂಡಳಿಯವರು ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿ ಅನುಸರಿಸುತ್ತಾ ಬ್ರಿಟಿಷ್ ಪಾಲಸಿ ಮಾಡಿ ಒಡೆದುಆಳುವ ನೀತಿ ಅನುಸರಿಸುತ್ತಿದ್ದಾರೆಂದರು.
ಇನ್ನೊರ್ವ ಮುಖಂಡ ಈರಣ್ಣ ಹಲಗೇರಿ ಮಾತನಾಡಿ ಕಾರ್ಮಿಕರ ಬೆವರಿನ ಫಲವಾಗಿ ನಿಮ್ಮ ಕಂಪನಿ ದೇಶದಲ್ಲಿ ಹೆಸರು ಮಾಡಿದೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದೀರಿ ನಿಮ್ಮ ಬೆಳವಣಿಗೆಗೆ ಕಾರಣರಾದ ಕಾರ್ಮಿಕರ ಭವಿಷ್ಯದ ಬಗ್ಗೆ ಯೋಚಿಸದೆ ಅಂಧಾ ದರ್ಬಾರ್ ಮಾಡುತ್ತಿರುವ ನಿಮಗೆ ಖಂಡಿತ ಇನ್ನು ಮುಂದೆ ಅಂಕುಶ ಹಾಕುತ್ತೇವೆ ಎಂದರು. ಸುಮಾರು 10 ತಾಸುಗಳ ಕಾಲ ನಿರಂತವಾಗಿ ನಡೆದ ಪ್ರತಿಭಟನೆ ತಡರಾತ್ರಿಯಾಗುತ್ತಿದ್ದಂತೆ ಬೇರೆ ದಿಕ್ಕು ಕಾಣುತ್ತಿದ್ದಾಗ ಹೋರಾಟಕ್ಕೆ ಮಣಿದ ಕಂಪನಿಯ ಆಡಳಿತ ಮಂಡಳಿ ಮೃತ ಕಾರ್ಮಿಕ ದುರಗಪ್ಪನ ಮಗನಾದ ಪ್ರಜ್ವಲನಿಗೆ ಕಂಪನಿಯಲ್ಲಿ ಪರ್ಮೆನೆಂಟ್ ನೌಕರಿ, ಹೆಂಡತಿ ಇವರಿಗೆ ಕಂಪನಿಯ ಲೇಬರ್ ಕಂಟ್ರ್ಯಾಕ್ಟರನಲ್ಲಿ ಕೆಲಸ ಮತ್ತು 7 ಲಕ್ಷ ರೂ. ನಗದು ಹಾಗೂ ಭವಿಷ್ಯ ನಿಧಿ ಮತ್ತು ಇನ್ಸೂರನ್ಸ್ ಹಾಗೂ ಇತರೆ ಮೂಲಗಳಿಂದ ಬರುವ ಸೌಲಭ್ಯಗಳನ್ನು ಮುತುವರ್ಜಿ ವಹಿಸಿ ಕಂಪನಿ ಮೃತನ ಮನೆ ಬಾಗಿಲಿಗೆ ತಲುಪಿಸಬೇಕೆಂದು ಕಟ್ಟುನಿಟ್ಟಿನ ಒಪ್ಪಂದವನ್ನು ಕಂಪನಿ ಒಪ್ಪಿಕೊಂಡ ಮೇಲೆ ಮೃತ ಕಾರ್ಮಿಕನ ಪಾರ್ಥಿವ ಶರೀರವನ್ನು ತಡರಾತ್ರಿ 10 ಘಂಟೆಗೆ ಸ್ವ ಗ್ರಾಮ ಖಂಡೇರಾಯನಹಳ್ಳಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಕಂಪನಿಯ ಎಚ್.ಆರ್.ಡಿ. ಡಿಪಾರ್ಟಮೆಂಟಿನ ಚಿತ್ರ್ಪ, ಡಾ. ರವಿಕುಮಾರ ಪ್ರೊಡಕ್ಷನ್ ಮ್ಯಾನೇಜರ್, ಮುರುಗೇಶ ಮಹಾಂತಶೆಟ್ರ ಮತ್ತು ಇತರರು ಹಾಜರಿದ್ದರು. ಡಿ.ಎಸ್.ಪಿ. ಲೋಕೇಶ, ಸಿ.ಪಿ.ಐ ಸಿದ್ದೇಶ ಮತ್ತು ಪಿ.ಎಸ್.ಐ. ಪರಶುರಾಮ ಲಮಾಣಿ, ಗದ್ದೆಪ್ಪ ಗಂಜುಟಗಿ ತಮ್ಮ ನೂರಾರು ಪೊಲೀಸ್ ಪಡೆಯೊಂದಿಗೆ ಸೂಕ್ತ ಬಂದೋಬಸ್ತ ಒದಗಿಸಿದ್ದರು.
ಮೃತ ಕಾರ್ಮಿಕನ ಪರವಾಗಿ ಡಾಕೇಶ ಎಂ. ಲಮಾಣಿ, ರಾಘವೇಂದ್ರಗೌಡ, ಮಲ್ಲೇಶಪ್ಪ ತೋಟಗಾರ, ಶಿವಲಿಂಗೇಗೌಡ ಮುಂತಾದ ನೂರಾರು ಬಾಂಧವರು ಆಗಮಿಸಿದ್ದರು. ಕಂಪನಿಯ ಯೂನಿಯನ್ ಕೊಟ್ರೇಶಪ್ಪ ಓಲೇಕಾರ, ದೋಣಿಯಪ್ಪ ಸೊಟ್ಟಮ್ಮನವರ, ನಾಗರಾಜ ಕರಿಗಾರ, ಸಂತೋಷ ತಳವಾರ, ಮಂಜು ಓಲೇಕಾರ, ಸುರೇಶ ತಳವಾರ, ಬಸವರಾಜ ನಾಗೇನಹಳ್ಳಿ, ವಿರುಪಾಕ್ಷಗೌಡ ಗೌಡ್ರ, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ, ಹಾಲೇಶ ಕೆಂಚನಾಯ್ಕರ ಸೇರಿದಂತೆ ಕಂಪನಿಯ ಸುಮಾರು 750 ಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಅಗಲಿದ ಕಾರ್ಮಿಕ ದುರಗಪ್ಪ ಸಾವಿಗೆ ಆತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಬೆಳಗ್ಗೆ 11 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ ಒಗ್ಗಟ್ಟಿನಿಂದ ಊಟ ಉಪಚಾರ ಮಾಡದೆ ನಿಂತಲ್ಲೇ ನಿಂತು ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದು ಒಗ್ಗಟ್ಟು ಪ್ರದರ್ಶಿಸಿ ಶಾಂತತೆ ಕಾಯ್ದೆಕೊಂಡಿದ್ದು ಮಾದರಿಯಾಗಿತ್ತು. ಮೃತ ಕಾರ್ಮಿಕ ದುರಗಪ್ಪ ಗುಡ್ಡಪ್ಪ ಮಾಳಮ್ಮನವರ ಇವರ ಹೆಂಡತಿ ರೇಖಾ, ಮಕ್ಕಳಾದ ಪ್ರಜ್ವಲ, ಮಾಂತೇಶ, ಪ್ರದೀಪರನ್ನು ಬಿಟ್ಟು ಅಗಲಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 