ಗ್ರಾಮದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಿ: ಬಾಲಚಂದ್ರ ಜಾರಕಿಹೊಳಿ
ಮೂಡಲಗಿ 25: ತಮ್ಮ-ತಮ್ಮಲ್ಲಿಯ ವೈಯಕ್ತಿಕ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿಗೆ ಒಂದಾಗಿ ಒಗ್ಗಟ್ಟಾಗಿ ಶ್ರಮಿಸುವಂತೆ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 2.36 ಕೋಟಿ ರೂ. ವೆಚ್ಚದಲ್ಲಿ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದಾಗಿ ದುಡಿದರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ನೆರವಾಗಬೇಕು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮದ ಮಟ್ಟದಲ್ಲಿಯೇ ಪರಿಹರಿಸುವ ಕೆಲಸ ಮಾಡಬೇಕೆಂದು ಅವರು ಹೇಳಿದರು.
ಮುಖಂಡ ಹನಮಂತ ತೇರದಾಳ, ಪರಶುರಾಮ ಸನದಿ, ರಾವಸಾಬ ಪಾಟೀಲ, ಗಿರಿಗೌಡ ಪಾಟೀಲ, ಬಿ.ಬಿ. ಪೂಜೇರಿ, ಅಪ್ಪಯ್ಯ ಪೂಜೇರಿ, ಹನಮಂತ ನಾಯಿಕ, ಚನಗೌಡ ಪಾಟೀಲ, ಬಸವರಾಜ ಕಸ್ತೂರಿ, ಲಕ್ಷ್ಮಣ ತೆಳಗಡೆ, ನಾಗಪ್ಪ ಸನದಿ, ಜಡೆಪ್ಪ ಮಂಗಿ, ಪಾರೇಶ ಹುಕ್ಕೇರಿ, ಅಜೀತ ಹೊಸಮನಿ, ಪರಸಪ್ಪ ಉಪ್ಪಾರ, ಮಾನಿಕ ಬೋಳಿ, ಮಾರುತಿ ಸರ್ವಿ, ಪರಮಾನಂದ ತುಬಾಕಿ, ಬಸು ತುಂಬೂಚಿ, ಲಗಮಣ್ಣಾ ಕುಟ್ರಿ, ಉದ್ದಪ್ಪ ಹಳ್ಳೂರ, ಲಕ್ಕಪ್ಪ ತೆಳಗಡೆ, ಮಹಾದೇವ ಬಡ್ಡಿ, ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ : ಮೂಡಲಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ 2.36 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.