ಅಂತರರಾಷ್ಟ್ರೀಯ

ವರ್ಕ್ ಫ್ರಮ್ ಹೋಂ... ಗೂಗಲ್ ಮಹತ್ವ ನಿರ್ಧಾರ

ವರ್ಕ್ ಫ್ರಮ್ ಹೋಂ...  ಗೂಗಲ್  ಮಹತ್ವ ನಿರ್ಧಾರ

ವಾಷಿಂಗ್ಟನ್, ಅ ೨೨  ತಂತ್ರಜ್ಞಾನ  ದಿಗ್ಗಜ ಗೂಗಲ್  ಮತ್ತೊಂದು ಪ್ರಮುಖ  ನಿರ್ಧಾರ   ತೆಗೆದುಕೊಳ್ಳುತ್ತಿದೆ.
ತನ್ನ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬೇಕೇ   ಅಥವಾ  ಕಛೇರಿಗೆ  ಕರೆಸಿಕೊಳ್ಳಬೇಕೇ    ಎಂಬ  ವಿಷಯದಲ್ಲಿ    ಮುಂದುವರಿದಿದ್ದ   ಸಂಧಿಗ್ಥತೆಗೆ    ಉತ್ತರ ಕಂಡುಕೊಂಡಿದೆ.  ಈ  ಎರಡರ  ನಡುವೆ  ಮಧ್ಯಮ  ಮಾರ್ಗವಾಗಿ  ಹೊಸ  ನೀತಿಯನ್ನು  ಜಾರಿಗೆ ತರಲಿದ್ದೇವೆ   ಎಂದು   ಆ ಸಂಸ್ಥೆಯ   ಸಿ ಇ ಓ   ಸುಂದರ್ ಪಿಚಾಯ್  ಹೇಳಿದ್ದಾರೆ.


ಕೊರೊನಾ  ಸಾಂಕ್ರಾಮಿಕ  ಕಂಡು ಬಂದ  ನಂತರ    ಪ್ರಪಂಚದಾದ್ಯಂತದ  ಕೆಲಸದ ವಿಧಾನಗಳಲ್ಲಿ ಬದಲಾವಣೆಗಳಾಗಿವೆ.    ಕೋವಿಡ್ ನಿಯಮಗಳ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಗಳಿಗೆ  ಸೀಮಿತಗೊಂಡಿದ್ದಾರೆ.  ಉದ್ಯೋಗಿಗಳು  ಸಹ  ಮನೆಯಿಂದಲೇ   ವರ್ಕ್  ಫ್ರಮ್   ಹೋಂ ವಿಧಾನದಲ್ಲಿ  ಕೆಲಸ ಮಾಡುತ್ತಿದ್ದಾರೆ. ಸುಮಾರು  ಒಂದೂವರೆ  ವರ್ಷದಿಂದ  ಈ   ವಿಧಾನವನ್ನು   ಜಗತ್ತಿನ  ಹಲವು  ದೊಡ್ಡ ಕಂಪನಿಗಳು ಮುಂದುವರಿಸುತ್ತಿವೆ.

ಸುದ್ದಿ ಓದಿ