ಮಹಿಳೆ ಆರೋಗ್ಯವಾಗಿದ್ದರೆ, ಇಡಿ ಕುಟುಂಬವೆ ಆರೋಗ್ಯ - ವಿಜಯ ರವದಿ.
ಹುಕ್ಕೇರಿ 16: ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಹಿಳೆಯರಿಗೆ ಉಚಿತವಾಗಿ ಯೋಗ ಶಿಬಿರವನ್ನು ಹಮ್ಮಿಕೋಳ್ಳಲಾಗಿದೆ. ಪಟ್ಟಣದ ವಿಜಯ ರವದಿ ಸಮಾಜ ಸೇವಾ ಸಂಸ್ಥೆ, ಪತಂಜಲಿ ಯೋಗ ಸಮಿತಿ ಹಾಗೂ ರೈತ ಹಿತರಕ್ಷಣಾ ಸಮಿತಿ ಇವರ ಸಯೋಗದಲ್ಲಿ ಮಹಿಳಾ ಯೋಗ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಪ್ರತಿದಿನ ಬೆಳಿಗ್ಗೆ 5 ಘಂಟೆಯಿಂದ ನಗರ ಹೋರವಲಯದ ರವದಿ ಫಾರ್ಮ ಹೌಸ್ದಲ್ಲಿ ಜರುಗುತ್ತಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅರ್ಬನ್ ಬ್ಯಾಂಕ ನಿರ್ದೆಶಕ ವಿಜಯ ರವದಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಹುಕ್ಕೇರಿ ನಗರದಲ್ಲಿ ಮಹಿಳಾ ಯೋಗ ಮಹೋತ್ಸವ ಮಾಡುವ ಮೂಲಕ ಮಹಿಳೆಯರಿಗೆ ಯೋಗ ಮತ್ತು ಪ್ರಾಣಾಯಾಮ ಶಿಬಿರ ಹಮ್ಮಿಕೊಂಡು ಮಹಿಳೆಯರ ಆರೋಗ್ಯದ ಬಗ್ಗೆ ಒತ್ತು ನೀಡಲಾಗಿದೆ. ಒಬ್ಬ ಮಹಿಳೆ ಯೋಗ ಕಲಿತರೆ ಇಡಿ ಕುಟುಂಬವೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು. ಪ್ರತಿದಿನ ಯೋಗ ಶಿಬಿರಕ್ಕೆ ಆಗಮಿಸಲು ಕೋರ್ಟ ಸರ್ಕಲ್ದಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಯೋಗ ಮಾರ್ಗದರ್ಶಕಿ ಕುಮಾರಿ ಸರೋಜಾ ಹುಂಡೇಕರ ಮಾತನಾಡಿ, ಮಹಿಳೆಯರು ಅನೇಕ ಕೌಟುಂಬಿಕ ಮತ್ತು ವಯಕ್ತಿಕ ಸಮಸ್ಯೆಗಳಿಂದ ಬಳಲಿ ಮಾನಸಿಕವಾಗಿ ಕುಗ್ಗಿ ಆರೋಗ್ಯ ಹಾಳು ಮಾಡಿಕೊಳ್ಳುವದರ ಬದಲು ಪ್ರತಿದಿನ ಯೋಗ ಮಾಡಿ ರೋಗ ಮುಕ್ತ ಮಾಡಿಕೊಳ್ಳಬೇಕು ಎಂದರು. ಯೋಗ ಶಿಕ್ಷಕ ಬಿ ಎಸ್ ಕೋಳೆಕರ ಮಾತನಾಡಿ ಕೇವಲ ಮಹಿಳೆಯರು ಅಷ್ಟೇ ಯೋಗ ಮಾಡದೆ ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ಸ್ವಾಸ್ಥ್ಯ ಜೀವನ ನಡೆಸಬೇಕು, ಮಹಾಮಾರಿ ಕೊರೊನಾ ರೋಗ ತಡೆಗಟ್ಟಲು ಯೋಗ ಮತ್ತು ಪ್ರಾಣಾಯಾಮ ಸಹಕಾರಿಯಾಗುತ್ತದೆ ಎಂದರು.
ಪುರಷರಿಗೂ ಸಹ ಪ್ರತ್ಯೇಕವಾಗಿ ಶಿಕ್ಷಕ ಕೆ ಉ ಬಡಿಗೇರ ಮಾರ್ಗದರ್ಶನದಲ್ಲಿ ಯೋಗ , ಪ್ರಾಣಾಯಾಮ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ರಾಜ್ಯ ಮಹಿಳಾ ಪ್ರಭಾರಿ ಆರತಿ ಕಾನಗೊ, ಡಾ, ಶೀತಲ ಭಿಡೆ, ಗವಿಶ ರವದಿ, ಸಂಜಯ ಕುಸ್ತಿಗಾರ, ಸಂದೀಪ ಸೂರ್ಯವಂಶಿ, ಶಿವಲಿಲಾ ರವದಿ, ಲೀಲಾ ರಜಪೂತ, ಸವೀತಾ ಏಣಗಿಮಠ, ಸುಧಾ ಕುಂಬಾರ, ಸೋಮಶೇಖರ ಮಠಪತಿ ಮೊದಲಾದ ಯೋಗ ಮಾರ್ಗದರ್ಶಕರು ಉಪಸ್ಥಿತರಿದ್ದರು.