ಮೂಡಲಗಿ

ಮಹಿಳೆ ಅನುಮಾನಸ್ಪದ ಸಾವು

ಮಹಿಳೆ ಅನುಮಾನಸ್ಪದ ಸಾವು

ಮೂಡಲಗಿ ನವೆಂಬರ್ 03:  ಪಟ್ಟಣದ ಕಲ್ಮೇಶ್ವರ ವೃತ್ತದ ಹತ್ತಿರ ದರ್ಗಾ ಆವರಣದ ಒಳಗೆ ಇರುವ ಪತ್ರಾಸ್ ಶೆಡ್ಡಿನಲ್ಲಿ ಮಹಿಳೆಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.    

ಕೆಇಬಿ ಪ್ಲಾಟ್ ನಿವಾಸಿಯಾದ ಮಾಲವ್ವಾ ನಾಯಿಕ ಎಂಬುವವರ ಮಗಳು ಮಾದೇವಿ ಸನದಿ ಎಂಬ ಯುವತಿಯೂ ಸೋಮವಾರ ರಾತ್ರಿ ವೇಳೆಯಲ್ಲಿ ಸಾವನ್ನಪ್ಪಿದ್ದು. ಈ ಸಾವಿನ ಸುತ್ತ ಅನುಮಾನದ ಹುತ್ತ ಎಂಬುವಂತೆ ಆ ಯುವತಿಯ ಸಾವನ್ನಪ್ಪಿದ ಶವ ಇರುವರಿಂದ ಅನೇಕ ಅನುಮಾನ ಹುಟ್ಟಿಕೊಂಡಿರುವುದು ಪೋಲಿಸ್ ತನಿಖೆಯಿಂದ ಸತ್ಯಾಸತ್ಯೆತೆಗಳು ತಿಳಿದು ಬರಬೇಕಿದೆ.    

ಆದರೆ ಮೃತಳ ತಾಯಿ ಹೃದಯಾಘಾತವಾಗಿಯೇ ಅಥವಾ ಯಾವುದೋ ಕಾಯಿಲೆಯಿಂದಲೋ ಬಳಲಿ ಮೃತಳಾಗಿದ್ದಾಳೆ ಎಂದು ಸ್ಥಳೀಯ ಪೋಲಿಸ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‍ಐ ಎಮ್.ಎಸ್ ಬಡಿಗೇರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಸುದ್ದಿ ಓದಿ