ಅಂತರರಾಷ್ಟ್ರೀಯ

ಗೋಧಿ ರಫ್ತು ನಿಷೇಧ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ ಗೋಧಿ ಬೆಲೆ

ಗೋಧಿ ರಫ್ತು ನಿಷೇಧ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ ಗೋಧಿ ಬೆಲೆ

ಪ್ಯಾರಿಸ್: ಮೇ 16 : ತೀವ್ರ ಶಾಖದ ಅಲೆಯಿಂದ ಗೋಧಿ ಉತ್ಪನ್ನದ ಮೇಲೆ ಪರಿಣಾಮ ಹಾಗು ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಿಂದ ಗೋಧಿ ರಫ್ತು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಸೋಮವಾರ ಗೋಧಿ ಬೆಲೆಗಳು ಹೊಸ ದಾಖಲೆಯ ಮಟ್ಟಕ್ಕೆ ಏರಿವೆ.

ಐರೋಪ್ಯ ಮಾರುಕಟ್ಟೆ ಪ್ರಾರಂಭವಾದಂತೆ ಬೆಲೆಯು ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿಯಿತು.

ಈ ಹಿಂದೆ ಜಾಗತಿಕ ರಫ್ತಿನ ಶೇಕಡ 12 ರಷ್ಟನ್ನು ಹೊಂದಿದ್ದ ಕೃಷಿ ಶಕ್ತಿ ಕೇಂದ್ರವಾದ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣದ ನಂತರ ಜಾಗತಿಕವಾಗಿ ಗೋಧಿ ಬೆಲೆ ಗಗನಕ್ಕೇರಿದೆ.

ಗೊಬ್ಬರದ ಕೊರತೆ,ಕಳಪೆ ಫಸಲು ಮತ್ತು ಜಾಗತಿಕವಾಗಿ ಹಣದುಬ್ಬರದಿಂದ ಬೆಲೆ ಹೆಚ್ಚಾಗಿದೆ. ಇದು ಬಡ ದೇಶಗಳಲ್ಲಿ ಕ್ಷಾಮ ಮತ್ತು ಸಾಮಾಜಿಕ ಅಶಾಂತಿಯ ಭಯವನ್ನು ಹೆಚ್ಚಿಸಿದೆ.

ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ಭಾರತ ಮಾರ್ಚ್ ನಲ್ಲಿ ದಾಖಲೆಯ ಶಾಖದ ಅಲೆಯಿಂದಾಗಿ ಗೋಧಿ ರಫ್ತನ್ನ ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿತ್ತು.

ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಚಿಂತಿಸುತ್ತಿದೆ ಭಾರತ ಚಿಂತಿಸುತ್ತಿದೆ.

ಸುದ್ದಿ ಓದಿ