ಅಂತರರಾಷ್ಟ್ರೀಯ

ಪಶ್ಚಿಮ ಆಫ್ರಿಕಾ: ಹುಲ್ಲಿನ ಶಾಲೆಗೆ ತಗುಲಿದ ಬೆಂಕಿ: 26 ವಿದ್ಯಾರ್ಥಿಗಳು ಬಲಿ

ಪಶ್ಚಿಮ ಆಫ್ರಿಕಾ: ಹುಲ್ಲಿನ ಶಾಲೆಗೆ ತಗುಲಿದ ಬೆಂಕಿ: 26 ವಿದ್ಯಾರ್ಥಿಗಳು ಬಲಿ

ನೈಜರ್: ನ. 9: ಪಶ್ಚಿಮ ಆಫ್ರಿಕಾದ ನೈಜರ್‌ನ ಎರಡನೇ ಅತಿದೊಡ್ಡ ನಗರವಾದ ಮರಡಿಯ ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 26ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿವೆ. ಅಲ್ಲದೇ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಎಎಫ್‌ಎನ್ ಎಂಬ ಪ್ರಿ-ಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ  ಒಣಹುಲ್ಲಿನಿಂದ ಮಾಡಿದ ಮೂರು ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಅವಘಡದಲ್ಲಿ 3 ರಿಂದ 8 ವರ್ಷದೊಳಗಿನ ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಸೋಮವಾರ ತಡರಾತ್ರಿ ತಿಳಿಸಿದೆ.

ಬೆಂಕಿ ಯಾವ ಕಾರಣಕ್ಕೆ ಹತ್ತಿದೆ ಮತ್ತು ಎಲ್ಲಿಂದ ಇದು ಪ್ರಾರಂಭವಾಯಿತು ಎಂಬುದನ್ನು ಪತ್ತೆ ಮಾಡಲು ತನಿಖೆಯನ್ನು ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣದ ಪ್ರಾದೇಶಿಕ ನಿರ್ದೇಶನ ತಿಳಿಸಿದೆ.

ಪಶ್ಚಿಮ ಆಫ್ರಿಕಾದ ನೈಜರ್‌ನಲ್ಲಿ ಒಣಹುಲ್ಲಿನ ಗುಡಿಸಲುಗಳನ್ನು ತಾತ್ಕಾಲಿಕವಾಗಿ ತರಗತಿಗಳಾಗಿ ಬಳಸಲಾಗುತ್ತದೆ. ಎಪ್ರಿಲ್‌ನಲ್ಲಿ ನೈಜರ್‌ನ ರಾಜಧಾನಿ ನೈಮಿಯ ಹೊರವಲಯದಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಭಾರೀ ಬಿಸಿಗಾಳಿಯಿಂದ ಉಂಟಾದ ಬೆಂಕಿ ಅವಘಡದಲ್ಲಿ 20 ಮಕ್ಕಳು ಮೃತಪಟ್ಟಿದ್ದರು.

ಸುದ್ದಿ ಓದಿ