ರಬಾಕಾವಿಬನಹಟ್ಟಿ

ಪದ್ಮಾವತಿ ಮಹಾವಿದ್ಯಾಲಯ ಜ್ಞಾನದ ಭಂಡಾರ : ಸಿದ್ಧರಾಜ

ಪದ್ಮಾವತಿ ಮಹಾವಿದ್ಯಾಲಯ ಜ್ಞಾನದ ಭಂಡಾರ : ಸಿದ್ಧರಾಜ

ರಬಕವಿ-ಬನಹಟ್ಟಿ 27: ಪದ್ಮಾವತಿ ಕಾಲೇಜು ಶಿಸ್ತಿಗೆ ಇನ್ನೊಂದು ಹೆಸರಾಗಿದೆ. ಜ್ಞಾನದ ಮಂದಿರವಾಗಿದ್ದು, ವಿದ್ಯಾರ್ಥಿಗಳು ಗುರು-ಹಿರಿಯರಲ್ಲಿ ನಯ-ವಿನಯ ಮೈಗೂಡಿಸಿಕೊಂಡಿರಬೇಕೆಂದು ಸಿದ್ಧರಾಜ ಪೂಜಾರಿ ಹೇಳಿದರು.

ಅವರು ರಬಕವಿ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಹಜಾರೆ ಫೌಂಡೇಶನ್ ಪದ್ಮಾವತಿ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದ ಮಹತ್ವವನ್ನು ಅರಿಯುವದರ ಜೊತೆಗೆ ಸಮಯದ ಸದುಪಯೋಗ ಮಾಡಿಕೊಂಡು ಗುರಿಮುಟ್ಟಿ ನಿಮ್ಮ ಕಾಲೇಜು, ತಂದೆ, ತಾಯಿಗಳ ಋಣತೀರಿಸಬೇಕು, ಋಣತೀರಿಸಬೇಕೆಂದರೆ ದೇಶಕ್ಕೆ ಏನಾದರೂ ಒಂದು ಕೊಡುಗೆ ನೀಡುವ ಹಾಗೆ ಬೆಳೆಯಬೇಕೆಂದು ಎಂದು ಹಾರೂಗೇರಿಯ ಸೇಂಟ್ ಜೋಸೆಫ್ ಶಾಲೆಯ ಪ್ರಾಚಾರ್ಯ ರಮೇಶಕುಮಾರ ಘಂಟಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ತಾಳಿಕೋಟಿ ವಹಿಸಿದರು. ಅಲ್ಲಪ್ಪಣ್ಣ ಗುಂಜಿಗಾಂವಿ, ಮಹಾದೇವ ಕೋಟ್ಯಾಳ, ಸುಭದ್ರಾ ಪೂಜಾರಿಂ ಅತಿಥಿಗಳಾಗಿ ಆಗಮಿಸಿದ್ದರು. ಪದ್ಮಾವತಿ ಅಂತರಾಷ್ಟ್ರೀಯ ಶಾಲೆಯ ಪ್ರಾಚಾರ್ಯ ಬಸವರಾಜ ಕಲಾದಗಿ ಹಾಗೂ ಪದ್ಮಾವತಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಶೈಲ ಕುಂಬಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ