ಅಂತರರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಟ್ವಿಟರ್ ನಿಷೇಧ ತೆಗೆದು ಹಾಕುತ್ತೇವೆ: ಮಸ್ಕ್

ಡೊನಾಲ್ಡ್ ಟ್ರಂಪ್ ಟ್ವಿಟರ್ ನಿಷೇಧ ತೆಗೆದು ಹಾಕುತ್ತೇವೆ: ಮಸ್ಕ್

ವಾಷಿಂಗ್ಟನ್: ಮೇ 11 : ಟ್ವಿಟರ್ ಖರೀದಿಸುವ ತನ್ನ ಪ್ರಯತ್ನ ಯಶಸ್ವಿಯಾದರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ನಿಷೇಧವನ್ನು ವೇದಿಕೆಯಿಂದ ತೆಗೆದುಹಾಕುವುದಾಗಿ ಎಲೋನ್ ಮಸ್ಕ್ ಹೇಳಿದ್ದಾರೆ.

ಮಸ್ಕ್ ಪ್ರಕಾರ, ಮಾಜಿ ಯುಎಸ್ ಅಧ್ಯಕ್ಷರನ್ನು ನಿಷೇಧಿಸುವ ಟ್ವಿಟರ್ ನಿರ್ಧಾರವು ನೈತಿಕವಾಗಿ ತಪ್ಪು ಮತ್ತು ಮೂರ್ಖತನವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ಜನವರಿ 6 ರ ದಂಗೆಯ ನಂತರ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ 2021 ರ ಜನವರಿಯಲ್ಲಿ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ನಿಷೇಧಿಸಿತ್ತು.
ಎಲೋನ್ ಮಸ್ಕ್ ಪ್ರಕಾರ, ಈ ನಿಷೇಧವು ಮಾಜಿ ಅಧ್ಯಕ್ಷ ಟ್ರಂಪ್ ಅನ್ನು ಮೌನಗೊಳಿಸಲಿಲ್ಲ, ಬದಲಿಗೆ ಅವರದ್ದೆ ಆದ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಅವರ ಮಾತುಗಳು ಮುಂದುವರೆದಿವೆ. ಇದರಿಂದಾಗಿ ಟ್ರಂಪ್ ಅವರ ಧ್ವನಿ ಜನರನ್ನು ತಲುಪಿತು ಎಂದು ಮಸ್ಕ್ ತಿಳಿಸಿದ್ದಾರೆ.

ತನ್ನ ಖಾತೆಯನ್ನು ಪುನಃ ಸಕ್ರಿಯಗೊಳಿಸಿದ್ರೂ ಟ್ವಿಟರ್‌ ಪ್ಲ್ಯಾಟ್ ಫಾರ್ಮ್ ಗೆ ಹಿಂತಿರುಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಇದಕ್ಕೆ ಟೆಸ್ಲಾ ಮಾಲೀಕನಾಗಿರುವ ಮಸ್ಕ್, “ನಾನು ಟ್ರಂಪ್ ಮೇಲಿನ ಶಾಶ್ವತ ನಿಷೇಧವನ್ನು ತೆಗೆದುಹಾಕುತ್ತೇನೆ, ಆದರೆ ಇನ್ನೂ ತಾನು ಟ್ವಿಟರ್ ಹೊಂದಿಲ್ಲ, ಆದ್ದರಿಂದ ಇದು ಖಂಡಿತವಾಗಿಯೂ ಆಗುವುದಿಲ್ಲ” ಎಂದು ಹೇಳಿದರು.

ಸುದ್ದಿ ಓದಿ