ಅಂತರರಾಷ್ಟ್ರೀಯ

ಭಾರತಕ್ಕೆ ತೈಲ ಪೂರೈಸಲು ನಾವು ಸಿದ್ಧ: ರಷ್ಯಾ ವಿದೇಶಾಂಗ ಸಚಿವ

ಭಾರತಕ್ಕೆ ತೈಲ ಪೂರೈಸಲು ನಾವು ಸಿದ್ಧ: ರಷ್ಯಾ ವಿದೇಶಾಂಗ ಸಚಿವ

ನವದೆಹಲಿ: ಏಪ್ರಿಲ್ 01 : ಭಾರತ ಏನನ್ನಾದರೂ ರಷ್ಯಾದಿಂದ  ಖರೀದಿಸಲು ಬಯಸಿದರೆ,ನಾವು ಅದನ್ನು ಪೂರೈಸಲು ಸಿದ್ಧರಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ. 2 ದಿನ ಭಾರತ ಪ್ರವಾಸ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಗೆ  ಭೇಟಿ ನೀಡಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು.

ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತದ ಮಧ್ಯಸ್ಥಿಕೆಯ ಬಗ್ಗೆ ಅವರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು.ಭಾರತವು ರಷ್ಯಾದಿಂದ ಏನನ್ನು ಖರೀದಿಸಲು ಬಯಸುತ್ತದೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಉಕ್ರೇನ್ ಬಿಕ್ಕಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯವರ್ತಿಯಾಗುವ ಸಾಧ್ಯತೆಯ ಕುರಿತು ಅವರು, “ಭಾರತವು ಒಂದು ಪ್ರಮುಖ ಮತ್ತು ಗಂಭೀರ ದೇಶವಾಗಿದೆ. ಭಾರತವು ನಿರ್ಣಯವನ್ನು ಒದಗಿಸುವ ಪಾತ್ರವನ್ನು ವಹಿಸಿದರೆ, ಭಾರತವು ನಮ್ಮ ಸಾಮಾನ್ಯ ಪಾಲುದಾರನಾಗಿ… ನಾವು ಉಕ್ರೇನ್‌ನ ಭದ್ರತಾ ಖಾತರಿಗಾಗಿ ಭಾರತ ಅಂತಹ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ” ಎಂದಿದ್ದಾರೆ.

ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬಹುದು ಎಂಬ ಸೂಚನೆಗಳ ನಡುವೆ ಇಬ್ಬರು ವಿದೇಶಾಂಗ ಮಂತ್ರಿಗಳ ನಡುವಿನ ಉನ್ನತ ಮಟ್ಟದ ಮಾತುಕತೆಗಳು ನಡೆದವು ಮತ್ತು ದ್ವಿಪಕ್ಷೀಯ ವ್ಯಾಪಾರಕ್ಕಾಗಿ ರೂಬಲ್-ರುಪಾಯಿ ವ್ಯವಸ್ಥೆಯನ್ನು ಹೊಂದಲು ಎರಡೂ ಕಡೆಯವರು ಉತ್ಸುಕರಾಗಿದ್ದಾರೆ.

ರಷ್ಯಾದಿಂದ ಭಾರತಕ್ಕೆ ಒಂದು ಬ್ಯಾರೆಲ್​ಗೆ 35 ಡಾಲರ್​ ಭಾರೀ ರಿಯಾಯಿತಿ ದರದಲ್ಲಿ ತೈಲವನ್ನು ಮಾರಾಟ ಮಾಡಲು ರಷ್ಯಾ ನಿರ್ಧರಿಸಿದೆ.  ಭಾರತವು ಈ ವರ್ಷಕ್ಕೆ 15 ಮಿಲಿಯನ್ ಬ್ಯಾರೆಲ್‌ ಒಪ್ಪಂದ ಮಾಡಿಕೊಂಡಿದೆ.

ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುವ ಬಗ್ಗೆ ಯುಎಸ್ ವಿರೋಧ ವ್ಯಕ್ತಪಡಿಸಿದೆ. ಆದ್ರೆ ಯುಎಸ್ ವಿದೇಶಾಂಗ ಕಾರ್ಯದರ್ಶಿಲಿಜ್ ಟ್ರಸ್ ಅವರ ಸಮ್ಮುಖದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ “ತೈಲ ಬೆಲೆಗಳು ಹೆಚ್ಚಾದಾಗ, ದೇಶಗಳು ವಿದೇಶಗಳ ಮಾರುಕಟ್ಟೆಗೆ ಹೋಗುವುದು ಮತ್ತು ತಮ್ಮ ಜನರಿಗೆ ಉತ್ತಮ ವ್ಯವಹಾರಗಳು ಯಾವುವು ಎಂದು ನೋಡುವುದು ಸಹಜ ಎಂದು ನಾನು ಭಾವಿಸುತ್ತೇನೆ” ಎಂದು ಭಾರತದ  ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಭಾರತವು ರಷ್ಯಾವನ್ನು ಬಹಿರಂಗವಾಗಿ ಟೀಕಿಸಲಿಲ್ಲ ಮತ್ತು ಈ ವಿಷಯದಲ್ಲಿ ತಟಸ್ಥ ನಿಲುವು ತಳೆದಿದೆ. ರಷ್ಯಾವನ್ನು ಖಂಡಿಸುವ ನಿರ್ಣಯಗಳ ಮೇಲೆ ಭಾರತವು ಯುಎನ್‌ನಲ್ಲಿ ಮತದಾನದಿಂದ ದೂರವಿದ್ದರೆ, ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ರಷ್ಯಾ ಮಂಡಿಸಿದ ನಿರ್ಣಯಕ್ಕೂ ಭಾರತ ದೂರವಿತ್ತು.

ಸುದ್ದಿ ಓದಿ