ಲಡಾಖ್ ನಲ್ಲಿ ಯೋಧರ ಯೋಗಾಭ್ಯಾಸ! ಪಿಯೂಷ್ ಗೋಯಲ್ ಮೆಚ್ಚುಗೆ
ಲಡಾಕ್: ಜೂನ್ 21 : ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಎಲ್ಲೆಡೆ ಜನರು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಹಿಮವೀರರು ಕೂಡ ಯೋಗ ಪ್ರದರ್ಶನದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಹಿಮವೀರರು ಕೂಡ ಶೂನ್ಯ ತಾಪಮಾನದ ಲಡಾಖ್ ನಲ್ಲಿ ಯೋಗಾಭ್ಯಾಸ ಮಾಡಿದ್ದಾರೆ.
ಈ ಕುರಿತು ಕೂ ಮಾಡಿರುವ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಯೋಗವೇ ರಕ್ಷಾಕವಚ! ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಈ ಹಿಮವೀರರಿಗೆ ಲಡಾಖ್ ನಲ್ಲಿನ ಹವಾಮಾನವು ಪ್ರತಿಬಂಧಕವಾಗಿಲ್ಲ ಏಕೆಂದರೆ ಅವರು ಅಂತರರಾಷ್ಟ್ರೀಯ ಯೋಗ ದಿನವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.