ಅಂತರರಾಷ್ಟ್ರೀಯ

ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ: ತಾಲಿಬಾನ್ ವಕ್ತಾರ

ಭಾರತದೊಂದಿಗೆ ಉತ್ತಮ ಸಂಬಂಧ  ಬಯಸುತ್ತೇವೆ: ತಾಲಿಬಾನ್ ವಕ್ತಾರ

ಇಸ್ಲಾಮಾಬಾದ್, ಆಗಸ್ಟ್‌  28    ಭಾರತ  ಸೇರಿದಂತೆ    ಎಲ್ಲ ದೇಶಗಳೊಂದಿಗೆ   ನಾವು    ಉತ್ತಮ ಸಂಬಂಧ   ಬಯಸುತ್ತೇವೆ  ಎಂದು  ಅಫ್ಘಾನಿಸ್ತಾನದಲ್ಲಿ ಅಧಿಕಾರ  ವಶಪಡಿಸಿಕೊಂಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್  ಹೇಳಿದ್ದಾರೆ.  


ಯಾವುದೇ   ದೇಶದ  ವಿರುದ್ಧ   ನಮ್ಮ  ಪ್ರದೇಶವನ್ನು ಬಳಸಲು  ಯಾರಿಗೂ  ಅನುಮತಿಸುವುದಿಲ್ಲ  ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ  ARY ಸುದ್ದಿ ವಾಹಿನಿ ಈ  ಸಂಬಂಧ   ಸುದ್ದಿ  ಪ್ರಸಾರ ಮಾಡಿದೆ.   ಈ  ವಲಯದ  ಅತ್ಯಂತ  ಪ್ರಮುಖ ದೇಶವಾದ   ‘ಭಾರತ ಸೇರಿದಂತೆ  ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಆಶಿಸುತ್ತೇವೆ ಎಂದು  ಜಬಿಹುಲ್ಲಾ ಮುಜಾಹಿದ್  ಹೇಳಿದ್ದಾರೆ.

ಅಫ್ಘನ್ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ  ತನ್ನ ನೀತಿಗಳನ್ನು ರೂಪಿಸಬೇಕೆಂದು ನಾವು ಬಯಸುತ್ತೇವೆ. ಅಫ್ಘಾನಿಸ್ತಾನದಲ್ಲಿ ISIS-K ಮತ್ತು ತೆಹ್ರೀಕ್-ಇ-ತಾಲಿಬಾನ್ ನಂತಹ ಸಂಘಟನೆಗಳ  ಪ್ರಬಲವಾಗುತ್ತಿವೆ  ಎಂಬ  ಪ್ರಶ್ನೆಗೆ   ಅವರು, "ನಮ್ಮ ದೇಶದ  ಭೂ  ಪ್ರದೇಶವನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಲು ನಾವು  ಯಾರಿಗೂ ಅವಕಾಶ ನೀಡುವುದಿಲ್ಲ .  ನಾವು ಇದನ್ನು ಹಿಂದೆಯೇ ಸ್ಪಷ್ಟಪಡಿಸಿದ್ದೇವೆ ಎಂದು  ವಕ್ತಾರರು  ತಿಳಿಸಿದ್ದಾರೆ.


ಸುದ್ದಿ ಓದಿ