ವಿಶ್ವದಾದ್ಯಂತ 70 ದಶಲಕ್ಷ ಸಂಖ್ಯೆಯ ಗಡಿ ದಾಟಿದ ಕೊರೊನಾ ಪ್ರಕರಣಗಳು
ವಾಷಿಂಗ್ಟನ್, ಡಿ12: ಜಗತ್ತಿನಾದ್ಯಂತ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 70 ದಶಲಕ್ಷಗಳ ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ. ಶುಕ್ರವಾರ ಸ್ಥಳೀಯ ಕಾಲಮಾನ 21 ಗಂಟೆ ವೇಳೆಗೆ ಕೊರೊನಾ ವೈರಸ್ ಪ್ರಕರಣಗಳ ನಿಖರ ಸಂಖ್ಯೆ 70,000,538 ರಷ್ಟಿದ್ದು, 1.58 ದಶಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಮಾರ್ಚ್ 11ರಂದು ಘೋಷಿಸಿತ್ತು. ಈವರೆಗೆ ಅಮೆರಿಕಾ, ಭಾರತ ಹಾಗೂ ಬ್ರೆಜಿಲ್ ನಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.