ತಾಲಿಬಾನ್ ನಾಯಕರನ್ನು ಭೇಟಿ ಮಾಡಲು ಡಬ್ಲ್ಯುಎಚ್‌ಒ ಮುಖ್ಯಸ್ಥ ಕಾಬೂಲ್ ಗೆ ಆಗಮನ
ಕಾಬೂಲ್, ಸೆ.20 - ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಡಾ. ಟೆಡ್ರೋಸ್ ಅಧಾನೋಮ್ ಗೆಬ್ರೆಯೆಸಸ್ ಸೋಮವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿದರು.
ಈ ವೇಳೆ ಅವರು ಪ್ರಧಾನಿ ಮುಲ್ಲಾ ಹಸನ್ ಅಖುಂಡ್, ಉಪ ಪ್ರಧಾನಿ ಮುಲ್ಲಾ ಬರದಾರ್ ಮತ್ತು ಸರ್ಕಾರದ ಅಧಿಕಾರಿಗಳು ಸೇರಿದಂತೆ ತಾಲಿಬಾನ್ ನಾಯಕರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.
ಟೋಲೋ ನ್ಯೂಸ್ ಗೆ ಆರೋಗ್ಯ ಸಚಿವ ವಹೀದ್ ಮಜ್ರೂಹ್ ಅವರನ್ನು ತಿಳಿಸಿದಂತೆ, ಡಬ್ಲ್ಯುಎಚ್‌ಒ ಮುಖ್ಯಸ್ಥರು ಕಾಬೂಲ್‌ನಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಅಫ್ಘಾನ್ ಆರೋಗ್ಯ ವಲಯಕ್ಕೆ ವಿಶ್ವಬ್ಯಾಂಕ್ ನೆರವನ್ನು ಕಡಿತಗೊಳಿಸಿರುವ ಮತ್ತು ಅದನ್ನು ಪುನರಾರಂಭಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಆಯೋಗದ ಸದಸ್ಯ ಅಹ್ಮದುಲ್ಲಾ ವಾಸಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾ. ಗೆಬ್ರೆಯೆಸಸ್ ಅವರು ಪ್ರಧಾನಿ ಮುಲ್ಲಾ ಹಸನ್ ಅಖುಂಡ್, ಉಪ ಪ್ರಧಾನಿ ಮುಲ್ಲಾ ಬರದಾರ್ ಮತ್ತು ಉಸ್ತುವಾರಿ ಸಚಿವ ಸಂಪುಟದ ಹಂಗಾಮಿ ವಿದೇಶಾಂಗ ಸಚಿವರನ್ನೂ ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.