ಅಂತರರಾಷ್ಟ್ರೀಯ

ಸ್ವೀಡನ್ ಶಾಲೆಯಲ್ಲಿ ಹಿಂಸಾಚಾರ: ಇಬ್ಬರು ಮಹಿಳೆಯರು ಬಲಿ

ಸ್ವೀಡನ್ ಶಾಲೆಯಲ್ಲಿ ಹಿಂಸಾಚಾರ: ಇಬ್ಬರು ಮಹಿಳೆಯರು ಬಲಿ

ಸ್ಟಾಕ್‌ಹೋಮ್, ಮಾರ್ಚ್ 22: ದಕ್ಷಿಣ ಸ್ವೀಡಿಷ್‌ನ ಮಾಲ್ಮೋ ನಗರದ ಮಾಧ್ಯಮಿಕ ಶಾಲೆಯಲ್ಲಿ ನಡೆದ ಹಿಂಸಾಚಾರದಲ್ಲಿ 50 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಕೊಲೆಯ ಶಂಕೆಯ ಮೇಲೆ 18 ವರ್ಷದ ಯುವಕ ಶಾಲೆಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬಿಬಿಸಿ ಹೇಳಿದೆ.

ಶಾಲೆಯಲ್ಲಿ ನಿಖರವಾಗಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗುಂಡಿನ ದಾಳಿ ನಡೆದಿರುವ ಬಗ್ಗೆ ಯಾವುದೇ ವರದಿಗಳೂ ಸಹ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗಳಿಂದ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವೀಡನ್‌ನ ಮೂರನೇ ಅತಿದೊಡ್ಡ ನಗರದಲ್ಲಿರುವ ದೊಡ್ಡ ಮಾಧ್ಯಮಿಕ ಶಾಲೆಯಾದ ಮಾಲ್ಮೋ ಲ್ಯಾಟಿನ್ ನಲ್ಲಿ ಈ ಘಟನೆ ನಡೆದಿದೆ. ಹತ್ಯೆ ನಡೆದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಸುಮಾರು 50 ಜನ ಇದ್ದರು. ಚಾಕು ಹಾಗೂ ಕೊಡಲಿಯಿಂದ ಶಸ್ತ್ರ ಸಜ್ಜಿತನಾಗಿದ್ದ ವಿದ್ಯಾರ್ಥಿ ಪೊಲೀಸರಿಗೆ ದೂರವಾಣಿ ಕರೆ ಮಾಡಿ, ಇಬ್ಬರನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಪೊಲೀಸರು ಶಾಲೆಯನ್ನು ಖಾಲಿ ಮಾಡಿ ತಪಾಸಣೆ ನಡೆಸಿದ್ದು, ಇಬ್ಬರು ಶಾಲಾ ಸಿಬ್ಬಂದಿಯ ಹತ್ಯೆ ಬಗ್ಗೆ ಯಾವುದೇ ಹೆಚ್ಚಿನ ಸುಳಿವು ಸಿಕ್ಕಿಲ್ಲ.

ಸುದ್ದಿ ಓದಿ