ಮುಧೋಳ

ವೆಂಕಟೇಶ ಗುಡೆಪ್ಪನವರಗೆ ಜಿಲ್ಲಾ ಮಟ್ಟದ ಶಿಕ್ಷಣ ಪರಿಶ್ರಮ ಪ್ರಶಸ್ತಿ

ವೆಂಕಟೇಶ ಗುಡೆಪ್ಪನವರಗೆ ಜಿಲ್ಲಾ ಮಟ್ಟದ ಶಿಕ್ಷಣ ಪರಿಶ್ರಮ ಪ್ರಶಸ್ತಿ

   ಮುಧೋಳ: ದಾರವಾಡದ  ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಮತ್ತು ಆಯುಕ್ತರ  ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಷಯವಾರು ಶಿಕ್ಷಕರಿಗೆ ನೀಡುವ  ಜಿಲ್ಲಾ ಮಟ್ಟದ ಶಿಕ್ಷಣ ಪರಿಶ್ರಮ ಪುರಸ್ಕಾರ ಪ್ರಶಸ್ತಿಗೆ ನಗರದ ಶ್ರೀ ಸಂಗಮನಾಥ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ವೆಂಕಟೇಶ ಪಿ.ಗುಡೆಪ್ಪನವರ ಅವರನ್ನು ಆಯ್ಕೆ ಮಾಡಲಾಗಿದೆ ಇವರು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ   ವಾರ್ಷಿಕ  ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಬೋಧನಾ ಕಾರ್ಯದಲ್ಲಿ ಶೇ 125ಕ್ಕೆ ಶೇ 117.17ರಷ್ಟು ಸಾಧನೆ ಮಾಡಿದ ಪ್ರಯುಕ್ತ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ದಾರವಾಡ ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಸಹಾಯಕ ನಿರ್ದೇಶಕ  ಶಂಕರ ಗಂಗಣ್ಣವರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

   ದಾರವಾಡದ  ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ವಿಭಾಗ,ಆಯುಕ್ತರ  ಕಚೇರಿ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ  ಬಾಗಲಕೋಟ ಬವಿವಿ ಸಂಘದ  ಮಿನಿ ಸಭಾಭವನದಲ್ಲಿ  ಶಿಕ್ಷಣ ಪರಿಶ್ರಮ ಶಿಕ್ಷಣ ದಿನೋತ್ಸವ-2022ರ ಪ್ರಶಸ್ತಿ ಪ್ರದಾನ  ಸಮಾರಂಭದಲ್ಲಿ ಪ್ರಶಸ್ತಿಯನ್ನು  ಬಾಗಲಕೋಟೆ ಶಾಸಕ  ಡಾ.ವೀರಣ್ಣ ಚರಂತಿಮಠ, ವಿಶ್ರಾಂತ ಸಹ ನಿರ್ದೇಶಕ ಶಿವಶಂಕರ ಹಿರೇಮಠ ಸೇರಿದಂತೆ ಗಣ್ಯರ ಸಮ್ಮುಖದಲ್ಲಿಪ್ರದಾನ  ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ 

ಸುದ್ದಿ ಓದಿ