ಮೇ 24ಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಚುನಾವಣೆ

ಮೇ 24ಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಚುನಾವಣೆ  Veerashaiva Lingayat Mahasabha district elections on May 24

ಮುಂಡಗೋಡ 30: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ಮುಂಬರುವ ಮೇ 24 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ನಿವೃತ್ತ ಶಿಕ್ಷಕ ಎಸ್‌.ಬಿ. ಹುಗಾರ್ ಅವರು ತಿಳಿಸಿದ್ದಾರೆ.  

ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಲಿದ್ದು, ಚುನಾವಣಾ ವೇಳಾಪಟ್ಟಿಯ ವಿವರಗಳು ಈ ಕೆಳಗಿನಂತಿವೆ:  

ಚುನಾವಣಾ ವೇಳಾಪಟ್ಟಿ: ನಾಮಪತ್ರ ಸಲ್ಲಿಕೆ ಆರಂಭ: ಏಪ್ರಿಲ್ 29, ಬೆಳಿಗ್ಗೆ 10:30 ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನ: ಮೇ 6, ಮಧ್ಯಾಹ್ನ 3:00 ಗಂಟೆಯವರೆಗೆ.  

ನಾಮಪತ್ರ ಪರೀಶೀಲನೆ: ಮೇ 7 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅವಕಾಶ: ಮೇ 10, ಮಧ್ಯಾಹ್ನ 3:00 ಗಂಟೆಯವರೆಗೆ.  

ಮತದಾನದ ದಿನಾಂಕ: ಮೇ 24, ಬೆಳಿಗ್ಗೆ 8:00 ರಿಂದ ಸಂಜೆ 4:00 ಗಂಟೆಯವರೆಗೆ. ಅಂದೇ ಫಲಿತಾಂಶ ಪ್ರಕಟ:ಮೇ 24 ರಂದು ಮತದಾನ ಪ್ರಕ್ರಿಯೆ ಮುಗಿದ ತಕ್ಷಣವೇ ಸಂಜೆ ಮತ ಎಣಿಕೆ ಕಾರ್ಯ ನಡೆಯಲಿದೆ.  

ಮತ ಎಣಿಕೆಯ ನಂತರ ಅಂದೇ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಉಪ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಆಸಕ್ತರು ನಿಗದಿತ ಸ್ಥಳವಾದ ಬಸವೇಶ್ವರ ದೇವಸ್ಥಾನದಲ್ಲಿ ನಾಮಪತ್ರದ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.