ವೀರರಾಣಿ ಕಿತ್ತೂರು ಚನ್ನಮ್ಮನವರ ಬೃಹತ್ ನಾಟಕ
250 ಕಲಾವಿದರು, ನಿಜವಾದ ಆನೆ, ಒಂಟೆ, ಕುದುರೆಗಳಿಂದ ನಾಟಕ ಪ್ರದರ್ಶನ
ಶಿಗ್ಗಾವಿ 17: ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಇದೇ ಮಾ. 18,19,20 ರಂದು 3 ದಿನಗಳ ಕಾಲ ಸಂಜೆ 6 ಗಂಟೆಗೆ ರಂಗಾಯಣ ಧಾರವಾಡ ಪ್ರಸ್ತೂತ ಪಡಿಸುವ ವೀರರಾಣಿ ಕಿತ್ತೂರ ಚೆನ್ನಮ್ಮ ಬೃಹತ್ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ತಿಳಿಸಿದರು.
ಶಿಗ್ಗಾವಿಯ ಸಿಎಂ ಬೊಮ್ಮಾಯಿವರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿವರ ನೇತ್ರತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಸಚಿವರು ಭಾಗಿಯಾಗಿ ಚಾಲನೆ ನೀಡಲಿದ್ದು, ಉಚಿತ ಪಾಸ್‌ನೊಂದಿಗೆ ಕುಟುಂಬ ಸಮೇತರಾಗಿ ಭಾಗಿಯಾಗಿ ಮೂರು ದಿನಗಳ ಕಾಲ ವೀರರಾಣಿ ಕಿತ್ತೂರ ಚೆನ್ನಮ್ಮನವರ ಹೋರಾಟದ ಗತವೈಭದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನೋಡಬಹುದಾಗಿದೆ ಎಂದರು.
ಧಾರವಾಡ ರಂಗಾಯಣದ ಪ್ರಧಾನ ನಿರ್ದೇಶಕ ರಮೇಶ ಪರವೀನಾಯ್ಕರ ಮಾತನಾಡಿ ಭಾರತ ಸ್ವಾತಂತ್ರ ಸಂಗ್ರಾಮದ ಬೆಳ್ಳಿ ಚುಕ್ಕಿ ಎಂದೆ ಖ್ಯಾತಿಯಾದ ರಾಣಿ ಚೆನ್ನಮ್ಮನವರ ಜೀವನ ಆಧಾರಿತ ಬೃಹತ್ ನಾಟಕವನ್ನು 1 ವರೆ ವರ್ಷಗಳ ಹಿಂದೆಯೆ ಸಿ.ಎಮ್.ಬೊಮ್ಮಾಯಿವರ ನೇತ್ರತ್ವದಲ್ಲಿ ಹಿರಿಯ ಸಚಿವರ ಸಹಕಾರರದೊಂದಿಗೆ ಸಭೆ ಮಾಡಿ ಮಹಾರಾಷ್ಟ್ರದ ಜಾಂತಾರಾಜ ಮಾಧರಿಯ ಶಿವಾಜಿ ಮಹಾರಾಜರ ನಾಟಕದಂತೆ ರಾಣಿ ಚನ್ನಮ್ಮನವರ ನಾಟಕವನ್ನು ಕೆಸಿಡಿ ಆವರಣದಲ್ಲಿ ಡಿಸೆಂಬರ ತಿಂಗಳಿನಲ್ಲಿ ಪ್ರದರ್ಶನ ಮಾಡಲಾಗಿತ್ತು. ಅಂದು ಮೊದಲ ದಿನವೇ 35 ಸಾವಿರ, ಎರಡನೇ ದಿನ 50 ಸಾವಿರ ಜನ ನಾಟಕವನ್ನು ವೀಕ್ಷಿಸಿ ಸಾಕ್ಷಿಯಾದರು. 30 ರಿಂದ 50 ಸಾವಿರ ಜನ ನಾಟಕ ವಿಕ್ಷಣೆ ಮಾಡುತ್ತಾರೆ ಎಂದರೆ ಆ ನಾಟಕದ ಮಹತ್ವವನ್ನ ಚನ್ನಮ್ಮನವರ ನಾಟಕದಲ್ಲಿ ತಿಳಿಯಬಹುದಾಗಿದೆ. ಈಗಾಗಲೇ ಬೆಳಗಾವಿ, ಬಿಳಗಿ, ಚಿಕ್ಕೊಡಿ, ನಿಪ್ಪಾಣಿ, ಬೈಲಹೊಂಗಲ, ನರಗುಂದ ಸೇರಿದಂತೆ ಹಲವಾರು ಜಿಲ್ಲೆ ಮತ್ತು ತಾಲೂಕಗಳಲ್ಲಿ ಯಶಸ್ವಿ ಪ್ರದರ್ಶನ ಮಾಡಿದ್ದೇವೆ; ಒಟ್ಟು 22 ಪ್ರದರ್ಶನಲ್ಲಿ 5 ಲಕ್ಷ ಜನ ವೀಕ್ಷಿಸಿದ್ದಾರೆ ಎಂದರು.
ಒಟ್ಟು 250 ಕಲಾವಿಧರ ನಾಟಕ : ಒಟ್ಟು ಈ ನಾಟಕದಲ್ಲಿ 250 ಕಲಾವಿಧರು ಈ ನಾಟಕ ಪ್ರದರ್ಶನದ ರಂಗದಲ್ಲಿ ಬರಲಿದ್ದು ಕಲಾವಿಧರಿಗೆ ಸಿಎಂ ಬೊಮ್ಮಾಯಿಯವರು ಅವರ ಅಭಿಮಾನಿ ಬಳಗದವರಿಂದ ಎಲ್ಲ ವಸತಿ ಮತ್ತು ಊಟದ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಿದ್ದಾರೆ, ನಿಜವಾದ 2 ಆನೆ 2 ಒಂಟೆಗಳನ್ನು ಮತ್ತು 10 ಕುದುರೆಗಳನ್ನ ಬಳಸಲಾಗಿದೆ ಎಂದರು.
ಇದು ಸಿಎಂ ಬೊಮ್ಮಾಯಿಯವರ ಮುತುವರ್ಜಿ ಮತ್ತು ನಮ್ಮ ಭಾಗದ ಜನರಿಗೆ ಅವಶ್ಯವಾಗಿ ಕಿತ್ತೂರಾಣಿ ಚನ್ನಮ್ಮನವರ ನಾಟಕವನ್ನ ತೊರಿಸಲೇಬೆಕೆಂಬ ನಿಶ್ವಾರ್ಥ ಭಾವನೆಯ ಪ್ರದರ್ಶನವಾಗಿದೆ, ರಂಗಾಯಣವನ್ನು ಉಳಿಸಬೇಕೆಂಬ ನಿಶ್ವಾರ್ಥ ಭಾವನೆಯ ಪತ್ರಿಕಾ ಪ್ರಚಾರದಿಂದಲೂ ಸಹಿತ ಪ್ರದರ್ಶನಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಚನ್ನಮ್ಮನ ಹೋರಾಟದ ಗತವೈಭವ ನೋಡಲು ಸಾದ್ಯವಾಗಿ ಯಶಸ್ವಿಯಾಗಿವೆ, ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ 23 ಪ್ರದರ್ಶನಗಳು ಮುಗಿದಿದ್ದು ಶಿಗ್ಗಾವಿಯಲ್ಲಿ ನಡೆಯಲಿರುವ ಮೂರು ಪ್ರದರ್ಶನಗಳು ನಡೆದರೆ 25 ಪ್ರದರ್ಶನಗಳನ್ನ ಪೂರೈಸಲಿದೆ ಈ ರಜತ ಮಹೋತ್ಸವ, ಇದೊಂದು ಸಂತಸ ಕ್ಷಣವೂ ನಮ್ಮ ರಂಗಾಯಣಕ್ಕಿದ್ದು ಇದು ನಮ್ಮ ಹೆಮ್ಮೆ, ನಮ್ಮ ಜನಕ್ಕೆ ಈ ನಾಟಕ ತಲುಪಬೇಕೆಂಬ ಮಹದಾಸೆಯೊಂದಿಗೆ ಹೆಚ್ಚಿನ ಖಾಳಜಿಯನ್ನು ಬೊಮ್ಮಾಯಿಯವರ ಅಭಿಮಾನಿ ಬಳಗ ನೋಡಿಕೊಳ್ಳುತ್ತಿದೆ ಎಂದರು. ಈ ಸಂದರ್ಭದಲ್ಲಿ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ ಸದಸ್ಯ ನಿಂಗಣ್ಣ ಹರಿಜನ, ಗ್ರಾಪಂ ಸದಸ್ಯ ಸಂತೋಷ್ ದೊಡ್ಡಮನಿ ಇದ್ದರು.