ಜಮಖಂಡಿ

ವಿವಿಧ ಧಾರ್ಮಿಕ, ಸಾಮಾಜಿಕ ಜನಜಾಗೃತಿ ಪಾದಯಾತ್ರೆ ಸಮಾರಂಭ

ವಿವಿಧ ಧಾರ್ಮಿಕ, ಸಾಮಾಜಿಕ ಜನಜಾಗೃತಿ ಪಾದಯಾತ್ರೆ ಸಮಾರಂಭ

ಜಮಖಂಡಿ 04: ಪ್ರತಿಯೊಬ್ಬರು ಮಲ್ಲಯ್ಯನ ದರ್ಶನಕ್ಕಾಗಿ ಶ್ರೀಶೈಲಕ್ಕೆ ಹೋದರೆ,  ಶ್ರೀಶೈಲ ಜಗದ್ಗುರುಗಳೇ ಮಲ್ಲಯ್ಯನ ಅವತಾರದಲ್ಲಿ ಪಾದಯಾತ್ರೆ ಮೂಲಕ ಜನರ ಮಧ್ಯೆ ಸಂಚರಿಸುತ್ತಿದ್ದಾರೆ. ಧರ್ಮದ ಜಾಗೃತಿ, ಧರ್ಮರಕ್ಷಣೆಗೆ ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ರಾಯಲ್ ಪ್ಯಾಲೇಸ್ ಕಾಲೇಜು ಆವರಣದಲ್ಲಿ ಸೂರ್ಯಸಿಂಹಾಸನಾಧೀಶ್ವರ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣಮಹೋತ್ಸವ ಮತ್ತು ವಿವಿಧ ಧಾರ್ಮಿಕ, ಸಾಮಾಜಿಕ ಜನಜಾಗೃತಿ ಪಾದಯಾತ್ರೆ ಸಮಾರಂಭದಲ್ಲಿ ಮಾತನಾಡಿದರು.

ಕಷ್ಟ ಎಂಬುದು ಎಲ್ಲರಿಗೆ ಬರಲಿದ್ದು, ಸಮರ್ಪಕ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ಶಕ್ತಿ ಭಗವಂತ ಕರುಣಿಸಲಿ ಪ್ರಾಥರ್ಿಸಿಕೊಳ್ಳೋಣ. ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಬಂದವನೇ ನಿಜವಾದ ಸಾಧಕನಾಗುತ್ತಾನೆ. ತಂದೆಯ ಸ್ಮರಣಾರ್ಥವಾಗಿ ಶ್ರೀಶೈಲ ಕ್ಷೇತ್ರದಲ್ಲಿ ಒಂದು ಸುಸಜ್ಜಿತ ಕೊಠಡಿ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಪಾದಯಾತ್ರೆ ಯಶಸ್ವಿಯಾಗಿ ಪೂರ್ವ ಸಿದ್ದತೆಗಳು ಯಶಸ್ವಿಯಾಗಿವೆ ಎಂದರು.

ಉಧ್ಯಮಿ ಜಗದೀಶ ಗುಡಗುಂಟಿ ಮಾತನಾಡಿ, ಧರ್ಮ ರಕ್ಷಣೆಗಾಗಿ ಜಾಗೃತಿಗಾಗಿ ನಡೆದಿರುವ ಬೃಹತ್ ಪಾದ ಯಾತ್ರೆ ಜಮಖಂಡಿಗೆ ಆಗಮಿಸಿದ್ದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಪಾದಯಾತ್ರೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಶ್ರೀಶೈಲ ಪೀಠದಲ್ಲಿ ಜಮಖಂಡಿ ತಾಲೂಕಿನ ಭಕ್ತಾಧಿಗಳ ವಸತಿಗಾಗಿ ಹೊಸ ಮಾದರಿಯಲ್ಲಿ ಕಟ್ಟಡ ನಿಮರ್ಿಸುವ ಭರವಸೆ ನೀಡಿದರು.

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶರ್ೀವಚನ ನೀಡಿದರು. ವೇದಿಕೆ ಯಲ್ಲಿ ಶಿವಲಿಂಗ ಸ್ವಾಮೀಜಿ ಕಲ್ಮಠ ಬಿದರಿ, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಕೊಣ್ಣೂರಿನ ಡಾ.ವಿಶ್ವಪ್ರಭುದೇವರು., ಹಿರೇಪಡಸಲಗಿ ಸಿದ್ದಲಿಂಗ ಶಿವಾಚಾರ್ಯರು, ಬ್ರಹ್ಮಾನಂದಮಠದ ಗುರುಸಿದ್ದ ಸ್ವಾಮೀಜಿ, ಶ್ರೀಕಂಠ ಶಿವಾಚಾರ್ಯ, ನೀಲಕಂಠ ಶಿವಾಚಾರ್ಯ, ಶಿವಯೋಗಿ ಶಿವಾಚಾರ್ಯ, ಡಾ.ವಿವೇಕಾನಂದ ದೇವರು, ಕೃಷ್ಣಾನಂದ ಅವಧೂತರು, ರೇಣುಕಾಚಾರ್ಯ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಬಸವರಾಜ ಸ್ವಾಮೀಜಿ, ಸಂಗಮೇಶ್ವರ ಶಿವಾಚಾರ್ಯರು, ಪಂಡಿತರಾಧ್ಯ ಸ್ವಾಮೀಜಿ, ವೆಂಕಟರಾಮಣ್ಣ ಸ್ವಾಮೀಜಿ, ರಾಘವೇಂದ್ರ ಸ್ವಾಮೀಜಿ, ಮಾತೋಶ್ರೀ ಸುನಂದಮ್ಮ ತಾಯಿ, ವಿಶ್ವನಾಥ ಶಾಸ್ತ್ರಿ, ಬಸವ ಶಿವಾಚಾರ್ಯರು, ರಫೀಕ ಬಾರಿಗಡ್ಡಿ ಸಹಿತ ಹಲವರು ಇದ್ದರು.

ಮುಂತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭುದೇವರು ಶಿವಾಚಾರ್ಯರು ನಿರೂಪಿಸಿದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಭಕ್ತಾಧಿಗಳು ಶ್ರೀಗಳ ದರ್ಶನ ಪಡೆದರು. 

ಕಾರ್ಯಕ್ರಮಕ್ಕೂ ಮುಂಚೆ ನೂರಾರು ಭಕ್ತರಿಗೆ ಉಚಿತ ಲಿಂಗದೀಕ್ಷೆ ನೀಡಲಾಯಿತು. ಪಾದಯಾತ್ರಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಉಚಿತ ಔಷಧಿಗಳನ್ನು ವಿತರಿಸಲಾಯಿತು.

 

ಸುದ್ದಿ ಓದಿ