ಸೌಂದತ್ತಿ

ಪ್ರತಿಯೊಬ್ಬರು ಸ್ವಲ್ಪ ಸಮಯ ಧಾರ್ಮಿಕ ಕಾರ್ಯಕ್ಕೆ ಮೀಸಲಿಡಿ: ರಾಮಾರೂಢಶ್ರೀ

ಪ್ರತಿಯೊಬ್ಬರು ಸ್ವಲ್ಪ ಸಮಯ ಧಾರ್ಮಿಕ ಕಾರ್ಯಕ್ಕೆ ಮೀಸಲಿಡಿ: ರಾಮಾರೂಢಶ್ರೀ
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿರ್ವಾಣೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ “ರಾಮಚರಿತ” ಜೀವನ ದರ್ಶನ ಪ್ರವಚನ ಕಾರ್ಯ

ಉಗರಗೋಳ(ತಾ.ಸವದತ್ತಿ): ಸತ್ಯದ ಶೋಧನೆಗಾಗಿ ತಮ್ಮ ನೆತ್ತರವನ್ನೇ ಸುಟ್ಟುಕೊಂಡು ಹುಟ್ಟಿದಂತಾ ಸಿದ್ದಿ ಪುರುಷರು, ಶರಣರು, ಸಂತ ಮಾಹಾಂತ, ಮಾಹಾತ್ಮರು. ರಾಮಾಯಣ, ಮಹಾಭಾರತ, ಹಲವಾರು ಗ್ರಂಥಗಳನ್ನು ಬರೆದಿದ್ದು, ಮಠ ಮಾನ್ಯಗಳನ್ನು ಕಟ್ಟಿದ್ದು ಭಕ್ತರ ಉದ್ಧಾರಕ್ಕಾಗಿಯೇ ಎಂದು ಬಾಗಲಕೋಟೆಯ ರಾಮಾರೂಡ ಮಠದ ಪರಮ ರಾಮಾರೂಢ ಮಹಾಸ್ವಾಮಿಗಳು ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿರ್ವಾಣೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತೋತ್ಸವ ಮತ್ತು ರಾಮಾಯಣ ಗ್ರಂಥದ “ರಾಮಚರಿತ್ರೆ” ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಸಮಾನತೆ ಸಮಾಜ ನಿರ್ಮಿಸಲು ನಾವಿಂದು ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ, ಆಧ್ಯಾತ್ಮದ ನಿಜ ತಿರುಳನ್ನು ಮಾನವ ಕುಲಕ್ಕೆ ಸರಳವಾಗಿ ಮುಟ್ಟುವಂತೆ ದೇಶಾಂಧ್ಯಂತ ಸಾರಿದಂತಾ ಗುರುವನ್ನು ಪೂಜಿಸುತ್ತಾ, ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಕೆಲ ಸಮಯವನ್ನು ಧಾರ್ಮಿಕ ಕಾರ್ಯಗಳಿಗಾಗಿ ಮೀಸಲಿಡಬೇಕು ಎಂದು ಕರೆ ನೀಡಿದರು.

ಗುರುನಿರ್ವಾಣೇಶ್ವರ ಮಠದ ಪೀಠಾಧೀಪತಿ  ಗುರುಮಹಾಂತ ಶ್ರೀಗಳು ಮಾತನಾಡಿ  ಸಮರ್ಥ ಗುರು ತೋರಿದ ದಾರಿಯಲ್ಲಿ ಸಾಗಿ. ಆತ್ಮವಿಶ್ವಾಸ, ಪ್ರಯತ್ನ ಹಾಗೂ ಕ್ರಿಯಾಶೀಲತೆ ಇವು ಜೀವನದ ಯಶಸ್ಸಿನ ಗುಟ್ಟುಗಳು. ಇವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗಿರುತ್ತದೆ ಎಂದರು.

ಉಗರಗೋಳದ ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು ಸಾನಿಧ್ಯ ವಹಿಸಿದ್ದರು, ಯಲ್ಲಮ್ಮನಗುಡ್ಡದ ಈಶ್ವರಿಯ ವಿಶ್ವ ವಿದ್ಯಾಲಯದ ಬ್ರಹ್ಮಕುಮರಿ, ಬಸಯ್ಯ ತೋರಗಲ್ಲಮಠ, ಮಾಜಿ ಗ್ರಾಪಂ ಅಧ್ಯಕ್ಷ ರಮೇಶ ಕರಿಕಟ್ಟಿ, ಬಸವರಾಜ ಮುನವಳ್ಳಿ, ರಾಚೋಟಿ ಸಂಗಳದ, ಗುರಪ್ಪ ಕೆರಿ, ರಾಜು ಯರಗಣವಿ, ಕುದರಿ, ಜಿನ್ನಪ್ಪ ಬಡಿಗೇರ, ಅಶೋಕ ಹನಶಿ, ಕುಮಾರಸ್ವಾಮಿ ಹಿರೇಮಠ, ದುರಗಪ್ಪ ಹೂಲಿ, ರಾಮಣ್ಣಾ ಹೂಗಾರ, ರಾಮಣ್ಣಾ ಕಂಚಗಾರ, ನಜೀರಸಾಬ ಬಾರಿಗಿಡದ, ಬಸವರಾಜ ಹುಬ್ಬಳ್ಳಿ ಹಾಗೂ ಸಂಗೀತ ಕಲಾ ಬಳಗ ಮತ್ತು ಉಗರಗೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತವೃಂದ ಇದ್ದರು.

ಸುದ್ದಿ ಓದಿ