ಅಂತರರಾಷ್ಟ್ರೀಯ

ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಸೌದಿಯಲ್ಲಿ ಮಹಿಳೆಯರಿಗೆ ಪ್ರೇಮಿಗಳ ದಿನ ಆಚರಿಸಲು ಸ್ವಾತಂತ್ರ್ಯ

ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಸೌದಿಯಲ್ಲಿ ಮಹಿಳೆಯರಿಗೆ ಪ್ರೇಮಿಗಳ ದಿನ ಆಚರಿಸಲು ಸ್ವಾತಂತ್ರ್ಯ

ರಿಯಾದ್: ಫೆಬ್ರವರಿ 09 ವ್ಯಾಲೆಂಟೈನ್ಸ್ ಡೇ ಅಂದರೆ ಪ್ರೀತಿಯ ದಿನ,.. ಪ್ರೀತಿಯನ್ನು ವ್ಯಕ್ತಪಡಿಸುವ ದಿನ.. ಪ್ರಪಂಚದ ಎಲ್ಲಾ ದೇಶಗಳ ಯುವಕರು ಈ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ. ವ್ಯಾಲೆಂಟೈನ್ಸ್ ಡೇ ಅನ್ನು ಹೆಚ್ಚಿನ ದೇಶಗಳಲ್ಲಿ ಆಡಂಬರ ಮತ್ತು ವಿಭಿನ್ನ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಈ ದಿನದಂದು ಮದುವೆಯಾಗುವ ಪದ್ಧತಿಯೂ ರೂಢಿಗತವಾಗುತ್ತಿದೆ.

ಆದರೆ, ಇದೇ ಸಂದರ್ಭದಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಇಂದಿಗೂ ಪ್ರೇಮಿಗಳ ದಿನವನ್ನು ಆಚರಿಸಲು ನಿಷೇಧವಿದೆ. ಅಂತಹ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದು. ಸೌದಿ ಅರೇಬಿಯಾದಂತಹ ಮುಸ್ಲಿಂ ಬಾಹುಳ್ಯ ರಾಷ್ಟ್ರದಲ್ಲಿ ಪ್ರೇಮಿಗಳ ದಿನವನ್ನು ‘ಹರಾಮ್’ ಎಂದು ಪರಿಗಣಿಸಲಾಗಿದೆ. ಅಂದರೆ ಧರ್ಮದ ವಿರುದ್ಧ ಎಂದರ್ಥ. ಯಾರಾದರೂ ಅದನ್ನು ಆಚರಿಸುವುದು ಕಂಡುಬಂದರೆ ಅವರಿಗೆ ಭಾರಿ ದಂಡ ವಿಧಿಸಲಾಗುತ್ತಿತ್ತು.

ಈ ಮಧ್ಯೆ, ಸೌದಿ ಅರೇಬಿಯಾದ ಪ್ರಮುಖ ಧಾರ್ಮಿಕ ವಿದ್ವಾಂಸ ಶೇಖ್ ಅಹ್ಮದ್ ಖಾಸಿಮ್ ಅಲ್ಗಾಮ್ದಿ ಅವರ ಕಾರಣದಿಂದಾಗಿ 2018 ರಲ್ಲಿ ಮೊದಲ ಬಾರಿಗೆ ಪ್ರೇಮಿಗಳ ದಿನವನ್ನು ಆಚರಿಸಲಾಯಿತು. ಶೇಖ್ ಅಹ್ಮದ್ ಖಾಸಿಮ್ ತಮ್ಮ ಹೇಳಿಕೆಯಲ್ಲಿ “ಪ್ರೇಮಿಗಳ ದಿನವನ್ನು ಪ್ರೀತಿಯ ಹಬ್ಬವೆಂದು” ಪರಿಗಣನೆ ಮಾಡಲಾಗಿದೆ. ಈಗ ಸೌದಿಯಲ್ಲಿ ಬುರ್ಖಾದಲ್ಲಿರುವ ಮಹಿಳೆಯರು ಪ್ರೇಮಿಗಳ ದಿನದಂದು ಬೀದಿ ಬದಿಗಳಲ್ಲಿ ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ತಮ್ಮ ಪ್ರೇಮಿಗಾಗಿ ಹೂವುಗಳು ಮತ್ತು ಉಡುಗೊರೆಗಳನ್ನು ಬಹಿರಂಗವಾಗಿ ಖರೀದಿಸುವುದು ಕಂಡುಬರುತ್ತಿದೆ. ಆದಾಗ್ಯೂ, ಇಂದಿಗೂ ಅನೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲು ನಿಷೇಧಿಸಲಾಗಿದೆ.

ಸುದ್ದಿ ಓದಿ