ಅಂತರರಾಷ್ಟ್ರೀಯ

ಫೈಜರ್ ಲಸಿಕೆ, ತುರ್ತು ಬಳಕೆಗೆ ಅಮೆರಿಕ ಆಹಾರ- ಔಷಧ ಆಡಳಿತ ಸಮ್ಮತಿ

ಫೈಜರ್ ಲಸಿಕೆ,  ತುರ್ತು  ಬಳಕೆಗೆ ಅಮೆರಿಕ  ಆಹಾರ- ಔಷಧ ಆಡಳಿತ ಸಮ್ಮತಿ

ವಾಷಿಂಗ್ಟನ್, ಡಿಸೆಂಬರ್ 11:ತುರ್ತು ಸಂದರ್ಭಗಳಲ್ಲಿ ಫೈಜರ್ ಲಸಿಕೆ ಬಳಕೆ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಮ್ಮತಿ  ನೀಡಿದೆ.ಬಯೋಎನ್ಟೆಕ್  ಫೈಜರ್ ಲಸಿಕೆಗೆ ತುರ್ತು ಅನುಮತಿ ದೊರೆತಂತಾಗಿದೆ. ಎಫ್ಡಿಎ ಸಲಹಾ ಸಮಿತಿಯು ಹಾಗೂ ಕೆಲವು ವಿಜ್ಞಾನಿಗಳು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಕೆಲವೇ ದಿನಗಳಲ್ಲಿ  ಜನತೆಗೆ ಲಸಿಕೆ ನೀಡಲಾಗುತ್ತದೆ. ಜನವರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಬಳಿಕ ಲಸಿಕೆಯ ಪರಿಣಾಮದ ಬಗ್ಗೆ ನಿಗಾ ಇರಿಸಲಾಗುತ್ತದೆ. ಬ್ರಿಟನ್, ಕೆನಡಾ, ಬಹ್ರೇನ್, ಸೌದಿ ಅರೇಬಿಯಾ ಈಗಾಗಲೇ ಲಸಿಕೆಗೆ ಅನುಮತಿ ನೀಡಿದೆ. ಲಸಿಕೆಯು ಮೂರನೇ ಪ್ರಯೋಗವನ್ನೂ ಮುಗಿಸಿದೆ.ರಷ್ಯಾ ಹಾಗೂ ಚೀನಾದ ಹಲವು ಲಸಿಕೆಗಳು ಮಾರುಕಟ್ಟೆಗೆ ಬಂದಿವೆ ಆದರೆ ಸರಿಯಾಗಿ ಕ್ಲಿನಿಕಲ್ ಪ್ರಯೋಗಗಳನ್ನು ಪೂರೈಸಿಲ್ಲ. ಫೈಜರ್ ಲಸಿಕೆಯನ್ನು 44 ಸಾವಿರ ಮಂದಿ ಮೇಲೆ ಈಗಾಗಲೇ ಪ್ರಯೋಗಿಸಲಾಗಿದೆ. ಉತ್ತಮ ಫಲಿತಾಂಶ ಲಭ್ಯವಾಗಿದೆ.

ಸುದ್ದಿ ಓದಿ