ಅಶಾಂತಿ, ದುಷ್ಕೃತ್ಯಕ್ಕೆ ಕ್ರಮ: ರೌಡಿ ಶೀಟರ್ಗಳಿಗೆ ಪಿಎಸೈ ಗುಡಗನಟ್ಟಿ ; ಖಡಕ್ ಎಚ್ಚರಿಕೆ ; 10 ಜನ ಶೀಟರ್ ಸನ್ನಡತೆಯಿಂದ ಹೊರಕ್ಕೆ
ಲೋಕದರ್ಶನ ವರದಿ
ಸವದತ್ತಿ 02: ಮಾಸಿಕ ಹಾಗೂ ಚುನವಾಣಾ ಕುರಿತು ಇಲ್ಲಿನ ಪೋಲಿಸ್ ಠಾಣೆಯಲ್ಲಿ ಗುರುವಾರ ಸುಮಾರು 45 ರೌಡಿ ಶೀಟರಗಳಿಗೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ-ಸಮಾನತೆಗೆ ಭಂಗವನ್ನುಂಟು ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಪಿಎಸೈ ಶಿವಾನಂದ ಗುಡಗನಟ್ಟಿ ಮಾತನಾಡಿ, ಸಮಾಜದ ಹಿತರಕ್ಷಣೆ ಮಾಡದೆ ಅಶಾಂತಿ ಮೂಡಿಸಿ ದುಷ್ಕೃತ್ಯ ನಡೆಸುವ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಶಾಂತಿ ಕದಡಿದ ವ್ಯವಸ್ಥೆ ನಡೆಸಿದಲ್ಲಿ ಕಠಿಣ ಕ್ರಮದ ಖಡಕ್ ಎಚ್ಚರಿಕೆ ನೀಡಿದರು.
ರೌಡಿ ಶೀಟರ್ನಲ್ಲಿದ್ದವರು ಜೀವನ ಅಂತ್ಯದವರೆಗೂ ರೌಡಿ ಹಣೆಪಟ್ಟದಿಂದ ಮುಂದುವರೆಯುವ ಬದಲು ಸನ್ನಡತೆ ತೋರಿದಲ್ಲಿ ಆ ಪಟ್ಟಿಯಿಂದ ಅಂಥವರನ್ನು ಕಡಿಮೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಸಮಾಜವನ್ನೇ ಕುಟುಂಬವನ್ನಾಗಿಸುವ ಮನಸ್ಥಿತಿಯೂ ನಿಮ್ಮಲ್ಲಿದೆ. ಕಾರಣ ಬದಲಾವಣೆ ಬಯಸಿ ಉತ್ತಮ ನಡತೆ ಹೊಂದಿರಿ.
ಕಳೆದ ಆರೇಳು ತಿಂಗಳಲ್ಲಿ ಸುಮಾರು 10 ಜನರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರವಹಿಸಿ. ನಿಮ್ಮ ವೈಯಕ್ತಿಕ ಜೀವನ ಉತ್ತಮವಾಗಿಸಿಕೊಳ್ಳಿ. ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಿ, ಕುಟುಂಬಕ್ಕೆ ಉತ್ತಮ ವ್ಯಕ್ತಿಯಾಗಿ ಜೀವನ ಸಾಗಿಸುವದಾಗಬೇಕೆಂದರು.
ಈ ವೇಳೆ ಈರಣ್ಣ ಸಂಗೊಳ್ಳಿ, ಹನಮಂತಗೌಡ ವಾಸನ್, ಪ್ರೋಬೆಷನರಿ ಪಿಎಸೈಗಳಾದ ಬಸನಗೌಡ ನೀರಳೆ, ಲಕ್ಷ್ಮೀ ಬಿರಾದಾರ, ಎ.ಸಿ. ಕಪ್ಪತ್ತಿ ಇದ್ದರು.