ಅಫ್ಗಾನ್ ಕುರಿತು ಚರ್ಚಿಸಲು ಮಾನವೀಯ ಸಭೆ ಕರೆದ ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಸೆ 4 ಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿರುವ ಮಾನವೀಯ ಅಗತ್ಯಗಳ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮುಂದಿನ ವಾರ ಸ್ವಿಟ್ಜರ್ಲೆಂಡ್‌ನ ಜಿನೀವಾಕ್ಕೆ ತೆರಳಲಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯು ಅಫ್ಗಾನ್ ಜನರ ಪರವಾಗಿದ್ದು, ಈ ನಿಟ್ಟಿನಲ್ಲಿ ಚರ್ಚಿಸಲು ಪ್ರಧಾನ ಕಾರ್ಯದರ್ಶಿ ಸೆ. 13ರಂದು ಜಿನೀವಾದಲ್ಲಿ ದೇಶದ ಉನ್ನತ ಮಟ್ಟದ ಅಗತ್ಯಗಳನ್ನು ಪರಿಹರಿಸಲು ಉನ್ನತ ಮಟ್ಟದ ಮಾನವೀಯ ಸಭೆ ಕರೆಯಲಿದ್ದಾರೆ ಎಂದು ಡುಜರಿಕ್ ಹೇಳಿದರು .