ಅಂತರರಾಷ್ಟ್ರೀಯ

ಕ್ಯಾಲಿಫೋರ್ನಿಯಾದಲ್ಲಿ ನಿರುದ್ಯೋಗ ಪ್ರಮಾಣ ಶೇ 5.3 ಕ್ಕೆ ಹೆಚ್ಚಳ

ಕ್ಯಾಲಿಫೋರ್ನಿಯಾದಲ್ಲಿ ನಿರುದ್ಯೋಗ ಪ್ರಮಾಣ ಶೇ 5.3 ಕ್ಕೆ ಹೆಚ್ಚಳ

ವಾಷಿಂಗ್ಟನ್, ಏ 18,ಕ್ಯಾಲಿಫೋರ್ನಿಯಾದಲ್ಲಿ ಮಾರ್ಚ್ ತಿಂಗಳ ನಿರುದ್ಯೋಗ ಪ್ರಮಾಣ ಶೇ 5.3 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಉದ್ಯೋಗ ಅಭಿವೃದ್ಧಿ ಇಲಾಖೆ ಶನಿವಾರ ತಿಳಿಸಿದೆ.ಫೆಬ್ರವರಿ 12 ರಿಂದ ಮಾರ್ಚ್ 12 ರಿಂದ ನಡೆದ ಸಮೀಕ್ಷೆಯಲ್ಲಿ ಈ ಅಂಕಿ ಅಂಶ ವ್ಯಕ್ತವಾಗಿದ್ದು ಆಗ ಕೊರೊನಾ ವೈರಾಣು ಸೋಂಕು ಕ್ರಮೇಣ ವ್ಯಾಪಿಸುತ್ತಿತ್ತು. ಸುಮಾರು 99500 ಉದ್ಯೋಗಗಳನ್ನು ಕಡಿತ ಮಾಡಲಾಗಿದ್ದು ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 1.4 ರಷ್ಟು ಹೆಚ್ಚಳವಾಗಿತ್ತು. 1976 ರ ನಂತರ ಇದೇ ಮೊದಲ ಬಾರಿಗೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ, ಕೋಟ್ಯಧಿಪತಿ ಟಾಮ್ ಸೆಟ್ಯೇರ್ ನೇತೃತ್ವದ ಆರ್ಥಿಕ ಚೇತರಿಕಾ ಸಲಹಾ ಮಂಡಳಿ ರಚಿಸಲಾಗುವುದು ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗವಿನ್ ನ್ಯೂಸಂ ಹೇಳಿದ್ದಾರೆ.ಫೆಡರಲ್ ರಿಸರ್ವ್ ನ ಮಾಜಿ ಅಧ್ಯಕ್ಷ ಜನೆತ್ ಯೆಲ್ಲೆನ್, ಡಿಸ್ನಿಯ ಕಾರ್ಯಕಾರಿ ಅಧ್ಯಕ್ಷ ಬಾಬ್ ಐಗರ್ ಮತ್ತು ಆಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಮಂಡಳಿಯಲ್ಲಿರಲಿದ್ದಾರೆ.ಕೊರೊನಾ ಸೋಂಕಿನಿಂದಾಗಿ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಿ ಸಂಕಷ್ಟದಲ್ಲಿರುವ ಕ್ಯಾಲಿಫೋರ್ನಿಯಾ ಜನರಿಗೆ ನೆರವಾಗಲು ಈ ನಿರ್ಧಾರ ಮಾಡಲಾಗಿದೆ.

ಸುದ್ದಿ ಓದಿ