ಅಂತರರಾಷ್ಟ್ರೀಯ

ರಷ್ಯಾದ ಶೆಲ್ ದಾಳಿಗೆ ಉಕ್ರೇನಿಯನ್ ನಟಿ ಬಲಿ

ರಷ್ಯಾದ ಶೆಲ್ ದಾಳಿಗೆ ಉಕ್ರೇನಿಯನ್ ನಟಿ ಬಲಿ

ಕೈವ್: ಮಾರ್ಚ್ 18 : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನು ಮುಂದುವರೆದಿದ್ದು, ಕೈವ್ ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಯಲ್ಲಿ ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವನ್ನಪ್ಪಿದ್ದಾರೆ.

ಯಂಗ್ ಥಿಯೇಟರ್‌ನ ಜನಪ್ರಿಯ ನಟಿ ಒಕ್ಸಾನಾ ಶ್ವೆಟ್ಸ್ (67) ಕೈವ್ ನಲ್ಲಿ ರಷ್ಯಾದ ಶೆಲ್ ದಾಳಿಯ ನಡುವೆ ಸಾವನ್ನಪ್ಪಿದ್ದಾರೆ. ಇವರು ತಮ್ಮ ನಟನೆಯ ಕಾರಣದಿಂದ ‘ಉಕ್ರೇನ್‌ನ ಗೌರವಾನ್ವಿತ ಕಲಾವಿದೆ’ ಎಂಬ ದೇಶದ ಅತ್ಯುನ್ನತ ಕಲಾತ್ಮಕ ಗೌರವಗಳನ್ನು ಪಡೆದಿದ್ದಾರೆ.

ಸುದ್ದಿ ಓದಿ