ನ್ಯಾಟೋ ಶೃಂಗಸಭೆ ದುರ್ಬಲ ಎಂದ ಉಕ್ರೇನಿಯನ್ ಅಧ್ಯಕ್ಷ
ಮಾಸ್ಕೋ ಮಾರ್ಚ್ 05 : ನ್ಯಾಟೋ ಶೃಂಗಸಭೆಯನ್ನು ‘ದುರ್ಬಲ’ ಎಂದು ಉಕ್ರೇನ್ ಘೋಷಿಸಿದೆ.ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇದೀಗ ಮುಕ್ತಾಯಗೊಂಡ ನ್ಯಾಟೋ ಶೃಂಗಸಭೆಯನ್ನು “ದುರ್ಬಲ” ಎಂದು ವೀಡಿಯೊ ಸಂದೇಶದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಕರೆದಿದ್ದಾರೆ.ಇಂದು ನ್ಯಾಟೋ ಶೃಂಗಸಭೆ ನಡೆದಿದ್ದು, ಇದು ದುರ್ಬಲ ಶೃಂಗಸಭೆ, ಹಾಗೂ ಗೊಂದಲಮಯ ಶೃಂಗಸಭೆ, ಪ್ರತಿಯೊಬ್ಬರೂ ಯುರೋಪ್ನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಂಬರ್ ಒನ್ ಗುರಿಯಾಗಿ ಪರಿಗಣಿಸುವುದಿಲ್ಲ ಎಂದು ತೋರಿಸುವ ಶೃಂಗಸಭೆ” ಎಂದು ಝೆಲೆನ್ಸ್ಕಿ ಶುಕ್ರವಾರ ಹೇಳಿದರು.ಮಿಲಿಟರಿ ಮೈತ್ರಿಕೂಟದ ಸದಸ್ಯರು ರಷ್ಯಾಕ್ಕೆ “ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳಿಗೆ ಶೆಲ್ ದಾಳಿಯನ್ನು ಪ್ರಾರಂಭಿಸಲು ಹಸಿರು ದೀಪ” ನೀಡಿದ್ದಾರೆ ಎಂದು ಝೆಲೆನ್ಸ್ಕಿ ಆರೋಪಿಸಿದರು, ನ್ಯಾಟೋ ಉಕ್ರೇನ್ 50 ಟನ್ ಡೀಸೆಲ್ ಇಂಧನವನ್ನು ಒದಗಿಸುವುದನ್ನು ಹೊರತುಪಡಿಸಿ, ಬೇರೆ ಏನನ್ನೂ ಮಾಡಲಿಲ್ಲ ಎಂದರು